ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ನಮಿಪೆ ಗುರುಸಂತತಿಗೆ ಸತತ ಗೆ ಜ್ಞಾನ ಭಕ್ಯಾದಿಗಳ ಕರುಣಿಸಲಿ ಎನಗೆಂದು ಪ ಹಂಸನಾಮಕ ಹರಿ ಬ್ರಹ್ಮಗುರುವರ ಸರೋ ಜಾಸನ ಪುತ್ರರೆನಿಸಿಕೊಂಬಾ ಆ ಸನಕ ಸನಂದನ ಕುಮಾರಕರ ಶಿಷ್ಯ ದೂ ರ್ವಾಸಮುನಿ ಜ್ಞಾನನಿಧಿ ತೀರ್ಥ ಪದಾಬ್ಜಗಳಿಗೆ 1 ಗರುಡವಾಹನತೀರ್ಥ ಕೈವಲ್ಲಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ ವರಕುಮಾರಕ ತಪೋರಾಜ ಸಂಯಮಿ ವಿಮಲ ಅಚ್ಯುತ ಪ್ರೇಕ್ಷರಿಗೆ 2 ಪದ್ಮನಾಭ ನರಹರಿಮುನಿಪ ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ 3 ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ ಪದ್ಮ ಸಂಜಾತ ವೇದವ್ಯಾಸರಾ ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ ಪಾದ ಕಮಲಗಳಿಗೆ 4 ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ ಸತ್ಯಬೋಧರ ಸತ್ಯಸಂಧವರರಾ ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು 5
--------------
ಜಗನ್ನಾಥದಾಸರು
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ನಿನ್ನ ಮಾತಿಗೆ ಮೆಚ್ಚುವನಾವಾವಾ ಪರಾಕು ಎಲೊ ಎಚ್ಚರಿಕೆ ಪ ಎಂತಾಗುವದೆಂದು ನುಡಿಯದಿರಿ ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ 1 ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ 2 ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು ಒದಗಿ ಕಳೆವೋಪಾಯ ಕಡಿಮೆನ್ನದಿರೊ ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ ಕದನದೊಳು ಬದುಕಿ ನರಧ್ವಜನೆ ಸಾಕ್ಷಿ3 ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ ಈ ಪರಾಕ್ರಮ ನಿನಗಲ್ಲೆನ್ನದಿರು ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ 4 ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ ಏನು ಸೋಜಿಗವೆಂಬೊ ಸೋಗು ಯಾಕೆ ಸಿರಿ ವಿಜಯವಿಠ್ಠಲರೇಯಾ ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ5
--------------
ವಿಜಯದಾಸ
ಪೊರೆದ್ಯಾಕೋ ಸೀತಾನಾಥ ತಂದೆ ಮಂದರಧರ ಎನ್ನೊಳ್ದಯ ಮಾಡಲೊಲ್ಲ್ಯಾಕೋ ಸೀತಾನಾಥ ಪ ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ 1 ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ 2 ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ 3 ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ ಸೀತಾನಾಥ ಅವ ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ 4 ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ 5
--------------
ರಾಮದಾಸರು
ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ ವರಋಷಿಗಳವರನಂತರದಿ ದೂರ್ವಾಸಮುನಿ ಪ್ರಾಜ್ಞತೀರ್ಥರುಮವರಿಗೆ 1 ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ ತ್ರಿವಿಧ ಜೀವಗುರುವೆನಿಸು ದಶಮತಿಯೆನಿಸುವ | ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ ಶ್ರೀಪಾದರಿಗೆ ಶಿಷ್ಯರು 2 ಆನಂದತೀರ್ಥವಿರಚಿತ ಗ್ರಂಥಗಳಿಗೆ ತ ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ ಗಾನಕ ಜಯಧ್ವಜಗುರುಪ್ರವರವರಶಿ ಪ್ರಸಾದದಿಂ 3 ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ ರಾಮಚಂದ್ರತೀರ್ಥರ್ | ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ ಶ್ರೀನಾರಾಯಣÁಖ್ಯ ಬಳಿಕ 4 ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ ವಿದ್ಯಾಪತಿಗುರು | ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ ವಿದ್ಯಾಪೂರ್ಣರವರ ಬಳಿಕ 5 ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ ತೀರ್ಥಯತೀಂದ್ರ ಶ್ರೀಪಾದರು ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ ಪದ್ಮಾಕ್ಷ ಗುರುರಾಮವಿಠಲ ನುಡಿಸಿದ ತೆರದೊ ತಿದ್ದುವುದು ಕರುಣದಿಂ 6
--------------
ಗುರುರಾಮವಿಠಲ