ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀಶನೆ ಬೇಗ ಬಾರೊ ಮನ್ಮನದಲಿ ಹರಣ ಪ ಚಾರು ಭಾಸ್ಕರ ಕ್ಷೇತ್ರ ಗಾರನೆ ದಶರಥಕುಮಾರ ಸೇವಕಾಗ್ರಣಿ ಅ.ಪ ವಾರಿಧಿ ಲಂಘಿಸಿದ ಶೂರನೆ ಗಿರಿಯಾಶ್ರಯದಿ ತೋರುವಿ ಶ್ರಮಪರಿ- ಹಾರಾರ್ಥಿಗಳ ತೆರ ಘೋರ ಪಾತಕಾಂಬುದ ಸ ಮೀರ ಪಾಲಿಸೆನ್ನನು 1 ತಂದು ನೀಡಿದಿ ದ್ರುಪದ ನಂದಿನಿಯಳಿಗೆ ಸೌ ಗಂಧಿಕ ಪುಷ್ಪ ದಯದಿ ವಂದಿಸುವೆನು ಮನ ಮಂದಿರದಲಿ ಯದು ನಂದನನಂಘ್ರೀ ನೋಳ್ಪಾ ನಂದವ ಕರುಣಿಸೊ 2 ಭೇದಾಬೋಧಿಸಿ ಬಲುಮೋದವ ಗರಿವ ಶಾಸ್ತ್ರ ನೀದಯದಲಿ ರಚಿಸಿ ವಾದಿ ಮದಗಜ ಮೃ ಗಾಧಿಪನೆನಿಸಿದ ಮೋದತೀರ್ಥಾಹ್ವಯಾ- ಗಾಧ ಮಹಿಮ ಗುರು 3 ಸತತ ಸೇವಿಪ ಗರ್ಭವತಿಯಾಗಿರುವ ವಿಪ್ರ ಸತಿಯ ನುಡಿಯ ಲಾಲಿಸಿ ನತಜನ ಪಾಲನೆ ಪ- ರ್ವತ ದಿಂದಿಳಿದಶ್ವತ್ಥ ಕ್ಷಿತಿರುಹ ಮೂಲದಿ ಪಾ- ರ್ವಾತಿ ನಾಥ ಸೇವಿತನೆ 4 ಈ ಸುಕ್ಷೇತ್ರದೊಳು ವಿದ್ವಾಂಸ ದೇವರಾಜಾಖ್ಯ ಸನ್ನುತ ವಾಸಕಾರ್ಪರ ನರ ಕೇಸರಿ ಗತಿ ಪ್ರಿಯ ದಾಸ ಪಾಲಿಸೊ ಗುರು ವ್ಯಾಸರಾಜ ಪೂಜಿತ 5
--------------
ಕಾರ್ಪರ ನರಹರಿದಾಸರು
ಶೌನಕಾದಿ ಮುನಿಗಳಿಗೆ ಸಾನುರಾಗದಲಿ ಪೇಳಿದರು 1 ಕೈಲಾಸಶಿಖರ ಮೆರೆವುದು ಮೇಲಾದ ರತ್ನಕಾಂತಿಗಳಿಂ2 ಜಂಬುಕೇತಕಿ ಪನಸ ಪುನ್ನಾಗ ಸರ್ವಾತಿಶಯದಲಿ ತೋರುವದು 3 ಸಿದ್ಧಿದಾಯಕ ವೆಂದಿಲ್ಲಿ ಪದಧ್ಯಾನದಿ ಕುಳಿತಿಹರು 4 ದಿವಿಜ ಅವನಿಧರಾಗ್ರಣಿಯಾಗಿ ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ ಗಿರಿಯು ಮೆರೆಯುವುದು5 ಪಾರ್ವತಿಯೊಡನೆ ಸತಿ ನಮಿಸಿ ನುಡಿದಳು 6 ನುಡಿಯ ಲಾಕ್ಷಣದಿ ನಾಕರುಣಿಸುವೆ ಕೇಳೆಂದ7 ವರಮಹಾಲಕ್ಷ್ಮಿಯ ವೃತವು ದೊರೆವುದು ಸಕಲಸೌಭಾಗ್ಯ 8 ಶ್ರಾವಣ ಪೂರ್ಣ ಮಾಸಿಯ ದಿನದಿ ಪೂಜಿಪದು ವಿಶ್ವಾಸದಿಂದಾರಾಧಿಸುತಲಿ 9 ಪಕ್ವಾನ್ನ ಲೇಹ್ಯಾದಿ ನೈವೇದ್ಯ ತತ್ತನ್ನಿಯಾಮಕರ ಚಿಂತಿಪುದು 10 ಕೃಪಾಪಯೋನಿಧೆಯ ಪೂಜಿಪುದು ಬಿಂಬಾಪರೋಕ್ಷಿಗಳು ಪೂಜಿಪರು 11 ಕಾಮಿತ ಪಡೆದವರ್ಯಾರು ಮಹಾಮಹಿಮೆಯನು ಚನ್ನಾಗಿ12 ಮಡದಿ ತಾನಿರಲು ಕರೆಯುವರೆಲ್ಲಾರು ಪುರದಿ 13 ವನಜನಾಭನ ಶೇವೆಯೆಂದು ಗುಣದಿ ಭೂಷಿತಳು 14 ಬಂದಳು ವರಮಹಾಲಕ್ಷ್ಮಿ ಪರಮ ಸಂಭ್ರಮದಿ 15 ನಿರ್ಮಿಸುವನು ಜಗವೆಲ್ಲ ನೀ ಕರುಣಿಸು ಮಾತೆ 16 ಶ್ರಾವಣ ಹರುಷದಿಂದೆನ್ನಯ ವೃತವ ವರಗಳನಿತ್ತಳು ದಯದಿ 17 ಸಂತೋಷದಲಿ ಪೇಳಲವರು ಚಿಂತಿತ ಫಲವೀವುದೆಂದು 18 ಸಿಂಗರಿಸಿದಳಾದಿನದಿ ವಿಪ್ರಾಂಗನೆಯರನು ಕರೆದಳು 19 ಶಿರಿದೇವಿ ಪೂಜಾಸಾಧನವ ನೆರೆದರಾ ದ್ವಿಜನಮಂದಿರದಿ 20 ಕುಂಭಗಳಿಟ್ಟಘ್ರ್ಯಾದಿಗಳಿಂ ಸುರರ ಸಮ್ಮುಖದಿ 21 ಇಂದಿರ ದೇವಿಗಾರುತಿಯ ಬಂಧÀ£ವÀನÉ ಮಾಡುತಿಹರು 22 ಪೂಜಿಸುತಿರಲಾಗೃಹವು ಸೋಜಿಗವಾಯ್ತು ನೋಳ್ಪರಿಗೆ 23 ಕೊರಳೊಳುನವರತ್ನಹಾರ ಸಿರಿದೇವಿ ಕರುಣವಿದೆಂದು 24 ಇತ್ತರು ಬಾಗಿಣಗಳನು ಪೋದರು ತಮ್ಮ ಮನೆಗೆ 25 ಪುಣ್ಯದಿಂದೆಲ್ಲರು ನಾವೆಂ ಧನಧಾನ್ಯ ಸಂಪದಾಗಮನ 26 ಪಾಲಿಸುವಳು ಸಿರಿಯೆಂದು ಶಿವನು ಹೀಗೆಂದು ||27| ಕಾಯಜ ಜನನಿಯ ಕಾಯುವದೆಂದು ನೀ ತಿಳಿಯೆ 28 ನಿರ್ಮಲ ಭಕ್ತಿಜ್ಞಾನ ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲಿವನು ನಿರುತ ಪಠಿಸಲು30
--------------
ಕಾರ್ಪರ ನರಹರಿದಾಸರು
ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ ಕೂಪಾರದಿಂದ ದಾಟಿಸೋ ಪ ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ ಭಜಕರ ಸುರತರುವೇ ಅ.ಪ ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ ಮೇದಿನಿ ಜಾತ ಪ್ರದಾತ ಮೋದಮುನಿಯ ಸುಮತೋದಧಿಚಂದಿರ ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ ಕಾಯ ಧೃವರಾಯ ಆಶ್ವರ್ಯ ಚರ್ಯ1 ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ ಯತೆ ಸಾರ್ವಭೌಮ 2 ವಿಭುದೇಂದ್ರ ಸಹಿತ ಛಾತ್ರಾ ನಿಮ್ಮನ್ನು ಕೇಳಲು ಸೂ- ಸರ್ವಾತಿಶಯದಿಸ- ಮುಖಗೀತಾನಾಮದಿ ಪ್ರಖ್ಯಾತ 3 ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ ಪಾವನ ತರ ಚರಿತ 4 ಜಗದೊಳು ಸನ್ಮಾನ್ಯ ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ ಗುರುರಾಯ ನರಹರಿಗತಿ ಪ್ರೀಯ 5
--------------
ಕಾರ್ಪರ ನರಹರಿದಾಸರು