(ವಿಜಯದಶಮಿ)
ಜಯಜಯ ದೇವ ಹರೆ ಜಯಜಯದೇವ ವಿ-
ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ.
ಕೀಟಕ ಶಕುನಿಯ ಕೂಟಭಾವನದ ಕಾ-
ದಾಟದಿ ಸೋತು ಮಹಾಟವಿಯ
ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ-
ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ 1
ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ-
ಭ್ರಮದೊಳಾಸನವೇರ್ದ ಯಮಸುತನ
ನಮಿಸಿದ ನೃಪತಿಯ ಭಯ ಪರಿಹರಿಸಿದ
ಸುಮನಸ ಗಣವಂದ್ಯ ಸರ್ವಾಂತರಾತ್ಮಕ 2
ಸಾರಥಿ ತಾನೆಂದು ಸೇರಿ ಪಾಂಡವರಿಗೆ
ಕೌರವರನ್ನು ಸಂಹಾರ ಗೈಸಿ
ಭಾರತೀಶಗೆ ಭೂಮಿ ಸೇರಿಸಿ ಸಲಹಿದ
ವಾರುಧಿಶಯನ ವೆಂಕಟಗಿರಿ ನಾಯಕ 3