ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು