ಒಟ್ಟು 10 ಕಡೆಗಳಲ್ಲಿ , 6 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ನೆನಿ ಮನವೇ ಪಾವನ ದೇವನ ಚರಿತ ಕಥನುವೇ | ನಿನಗಿದ-ವನಿಲಿ ನೆಚ್ಚಿರೆ ತನುವೇ ಪ ಘನ ಶ್ಯಾಮನದಯ ಪಡಿಯದ ಸಾರ್ಥಕ | ಜನುಮಗಳೇವದಿದು ಗುಣವೇ ಅ.ಪ ಸುರಲೋಕ ಮೊದಲಾದ ಸುರಪ ವಿಚ್ಛೈಸಿ | ಪರಿ ಸಾಧನ ಮಾಳ್ಪರೆ | ಸುರಭಿಯಿರಲು ವಿಡಿಸದ ಪುಳಿ ಪಾಲವ | ಕರೆಸುವೆನೆಂದು ಅರಸುವರೇ 1 ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ | ಧರೆಯ ದೈವಕ ತಲೆವಾಗುವರೇ | ಸುರ ತರುವಿನ ನೆರಳವನೇ ತ್ಯಜಿಸಿ | ಬ| ರ್ಬುರ ದ್ರುಮವನು ಸಾರುವೇ 2 ವಿಕಳಿತ ಮಾಡುವ ತಾಪತ್ರಯದಾ | ಸಕಲ ಹಳಾಹಳ ತ್ಯಜಿಸೀ ಅಖಿಳ ಜೀವನದೊಡಿಯನ ಸದ್ಮೂರ್ತಿಯ | ಹೃತ್ಕಮಲದೊಳಗಿರಿಸೀ 3 ಹರಿಮಹಿಮೆಯ ಕೊಂಡಾಡುತ ಪೊಗಳುತ | ಬೀರುತ ಗುರು ಭಕುತರಿಗೇ | ಪರಮ ಸದ್ಭಾವದ ಭಕುತಿಲಿ ಮುಣುಗೈನ | ವರತ ಪ್ರೇಮಾರ್ಣವದೊಳಗೇ 4 ನಯನದಿಂದಲೀ ಸ್ಮರಿಸುವ ಬಹು ಶರಣರ | ಭಯವ ನಿವಾರಣ ಮಾಡುವ | ದಯದಲಿ ಮಹಿಪತಿ ನಂದನ ಪಾಲಿಸು | ತಿಹಕರುಣಾಕರ ಮಾಧವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡು ಮನವೇ ಹರಿ ಚರಣದ ಭಜನೀ ಪ ಆವನು ಭಕುತಿಗೆ ಬೆರೆದವನಿಂದು | ದೇವ ಸಮಾನಹ ಧರಿಯ ಮನುಜ ನೀ 1 ವಿಷಯ ಸುಖೇಚ್ಛೆ ಬರ್ಬುರ ಧ್ರುಮಸಾರಿ | ವಸುಧಿಲಿ ತ್ಯಜಿಸುವೆಸುರಕುಜನೀ 2 ಗುರು ಮಹಿಪತಿ ಪ್ರಭು ದಯದೊಲವಿಂದಾ | ಮಾಯಾ ಮೋಹದ ರಜನೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ || ಶ್ರೀ ಹರಿ |ಕುಹಕರ ಸಂಗಕೆ ಬ್ಯಾಡೋ ಪ್ರಾಣಿ ಪ ಉರಿಹಸ್ತ ವರಕೊಟ್ಟು ಹರನು ಬಳಲಿದಾಗತ್ಪರದಿಂದವನ ಪೊರೆದ ಸುರನ ಸಂಹರಿಸಿದ1 ದಿತಿಜರ ಬಾಧೆಗೆ ಶತಮಖ ಪ್ರಾರ್ಥಿಸಲಮೃತವ ಕರದು ಅಹಿತರನು ವಂಚಿಸಿದ 2 ತರಳ ಪ್ರಹ್ಲಾದ ಕರ್ಬುರ ದೈತನ ಬಾಧಿಗೆ ಹರಿಯೆಂದೊರಲವನ ಪೊರೆದು ದೈತ್ಯನ ತರಿದ3 ಪರಮೇಷ್ಟಿ ಜನಕನಲ್ಲಿಅಷ್ಟೆ ಕರ್ತೃತ್ವವಿರಲು ಇಷ್ಟ್ಯಾಕ ಬಳಲುವಿ 4 ಗುರು ಮಧ್ವಾಂತರ್ಗತ ಗುರು ಪ್ರಾಣೇಶ ವಿಠಲ ವಿಠಲಾಸುರ ಮುಖ್ಯರಳಿದು ತನ್ನ ಶರಣ ಜನರ ಪೊರೆದಾ 5
--------------
ಗುರುಪ್ರಾಣೇಶವಿಠಲರು
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕ ನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ. ಗೌರೀಕುಮಾರ ಪಾರಾವಾರಗಭೀರ ಮಾರನವತಾರ ತಾರಕಾರಿ ಶ್ರೀಕರ1 ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜ ಕುಂಕುಮಾರುಣವರ್ಣ ಪೂರ್ಣಾಲಂಕೃತ ವಿರಜ2 ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರ ಕರ್ತ ಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ ನಿರ್ಭಯವ ಪಾಲಿಸು ಪ್ರೇಮಿಪ. ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ- ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕಅ.ಪ. ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ ಸೇವೆಗಾಲಸ್ಯವ ಮಾಳ್ಪರು ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು- ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1 ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ- ರಿಂದ ಪೂಜೆಗೊಳೈ ಷಣ್ಮುಖ ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2 ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ ಕೇವಲ ವಿಜ್ಞಾನಪ್ರಕಾಶ ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ- ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀಕಮಲಪ್ರಾಣೇಶಾಪವಿಮಲ ವೈಕುಂಠಪುರೀಶಾ ಶಿವಕಮಲಸಂಭವನುತ ಕರ್ಬುರನಾಶಾ ಅ.ಪನಿರುಪಮ ಸುಂದರ ಗಾತ್ರಾನಿತ್ಯಪರಿಪೂರ್ಣ ವೈಭವಪರಮಪವಿತ್ರಾಶರನಿಧಿತನಯಕಳತ್ರಾಶೇಷಪರಿಜನಕೃತಘೋರಪಾಪಾಂಧ ಮಿತ್ರಾ1ಸನಕಸನಂದನ ವಿನುತಾಶಶಿದಿನಕರಶತಕೋಟಿ ದಿವ್ಯ ಸುಚರಿತಾಜನನ ಮರಣ ಕ್ಲೇಶರಹಿತ ಶ್ರೀವನಜಸುದರ್ಶನ ವನಮಾಲ ಧರಿತ2ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ 3
--------------
ತುಳಸೀರಾಮದಾಸರು
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ.ಗೌರೀಕುಮಾರ ಪಾರಾವಾರಗಭೀರಮಾರನವತಾರ ತಾರಕಾರಿ ಶ್ರೀಕರ 1ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜಕುಂಕುಮಾರುಣವರ್ಣ ಪೂರ್ಣಾಲಂಕೃತವಿರಜ2ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರಕರ್ತಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ