ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಹೇಳಲಿ ವೆಂಕಟಗಿರಿಯ ದೃಷ್ಟಿಗೆ ಬಹು ಸಿರಿಯ ಬೆಟ್ಟವನೆ ಮನಸಿಟ್ಟೇರಲು ಬೇಡಿದ ಇಷ್ಟಾರ್ಥಗಳ ಈಡಾಡುವ ದೊರೆಯ ಪ ಚಿತ್ರ ವಿಚಿತ್ರದ ಮಹಾದ್ವಾರ ಚಿನ್ನದ ಗೋಪುರ ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ ಸುತ್ತಲು ಪ್ರಾಕಾರ ಹೆಚ್ಚಿನ ತೀವ್ರತವೆ ಮನೋಹರ ಮಾರುವ ವಿಸ್ತಾರ ಚಿತ್ತಜನಯ್ಯನ ಶೈಲವೆ ದೂರದಿಂ- ದ್ಹತ್ತಿ ಬರುವುದೀತನ ಪರಿವಾರ 1 ಕಟ್ಟಿದ ಉಡಿದಾರ ಉಟ್ಟಿದ್ದ ನಿರಿಜರಪೀತಾಂಬರ ಕೌಂಸ್ತುಭ ಮಣಿಹಾರ ಗಟ್ಟಿ ಕರಕಂಕಣ ಕುಂಡಲಧರ ಚತುರ್ಭುಜದಲಂಕಾರ ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ- ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2 ಆಕಾಶರಾಜನ ಕಿರೀಟ ಚಿತ್ರವು ಬಹುಮಾಟ ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ಭವ ಪಡಿಪಾಟ ಬಿಡಿಸುವ ಯಮಕಾಟ ಕೋಟಿ ಜನರ ಓಡ್ಯಾಟವೆ ನಮ್ಮ ಕಿ- ರೀಟಿಯ ಸಖ ಕೇಶವನ ಮಂದಿರದೊಳ್ 3 ತಪ್ಪುಗಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ಕಪ್ಪವ ಕಾಸು ಕವಡೆ ಮುಡುಪು ಹಾಕದೆ ತಾನೊಪ್ಪ ಜಪ್ಪಿಸಿ ನೋಡುವ ಜನರ ತಪ್ಪ ಹುಡಿಕ್ಯಾಡುತಲಿಪ್ಪ ಅಪ್ಪ ಮಹಿಮಾನಂತ ಮೂರುತಿ ತಾ- ನೊಪ್ಪಿದರೊಲಿದು ಕೊಡುವ ಸಾರೂಪ್ಯ 4 ದೇಶದೇಶದೊಳು ಈತನ ವಾರುತೆಯು ತುಂಬಿದ ಕೀರುತಿಯು ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ಲೇಸಾಗಿ ಜನರ ನೋಡುವ ರತಿಯು ಕರ್ಪುರದಾರತಿಯು ವಾಸವಾಗಿರುವ ಈ ಶೇಷಾದ್ರಿಯಲಿ ಭೀ- ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
--------------
ಹರಪನಹಳ್ಳಿಭೀಮವ್ವ
ತಾಂಬೂಲ ಪ್ರತಿಗ್ರಹವ ಮಾಡು ಮಾರಮಣಾಜಾಂಬೂನದಾಕಾರ ಜಲಜದಳನಯನಾ ಪಜಾಂಬವತಿ ಮೊದಲಾದ ಅಷ್ಟಮಹಿಯರೆಲ್ಲಸಾಂಬಾದಿ ಪುತ್ರರೊಡಗೂಡಿ ಸೇವಿಸಲುಸಾಂಬರಾಲಂಕಾರ ಸಕಲ ಭೋಗಂಗಳನುತಾಂಬೂಲವಿದು ಶೋಭನವ ಮಾಡುತಿಹುದಾಗಿ 1ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದಖ್ಯಾತಿವಡೆದಿಹ ಕ್ರಮುಕಫಲಗಳಿವರಿಂದನೂತನದ ಮೌಕ್ತಿಕದ ಚೂರ್ಣ ಕರ್ಪುರದಿಂದಪ್ರೀತಿುಡುವಂದದಲಿ ರಮ್ಯವಾಗಿರುತಿರುವ 2ಸ್ಫುರಿಸುತಿದೆ ನಿನ್ನ ಮಂಗಳಕಾಂತಿ ಸೂರ್ಯನಲಿಸ್ಫುರಿಸುತಿದೆ ಚಂದ್ರಾಗ್ನಿಗಳಲೀ ಪರಿಯಲಿಸ್ಮರಿಸಿದರೆ ಕೈವಲ್ಯ ಮೊದಲಾದ ಪದವೀವತಿರುಪತಿಯ ಸ್ಥಿರವಾಸ ಶ್ರೀ ವೆಂಕಟೇಶ 3 ಓಂ ನವನೀತ ನಟಾಯ ನಮಃ
--------------
ತಿಮ್ಮಪ್ಪದಾಸರು
ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ ರ್ಪುರದ ವೀಳಯದ ಮಡುಪುಗಳನೇ ಕೊಟ್ಟು ಪರಿಯಂತ ಕಾಲನೊತ್ತುತ ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ 1 ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ 2 ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ 3
--------------
ಬೇಲೂರು ವೈಕುಂಠದಾಸರು
ಬಡನಡುವು ಬಾಲೆಯರ ಕೂಡಿ | ಪಾ | ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ 1 ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ | ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು | ವಾಲೆ ಪೊಂಪುಷ್ಟ ಬುಗುಡಿ ಥೋ | ರನ್ಮುತ್ತು ನಾಸಾಮಣಿ | ಅರರೆ | ಮನ್ಮನೋಹರವಾದ ಕಡಕ ಕಂಕಣ ಮುದ್ರೆ | ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು | ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು | ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ 2 ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ | ಅಗರು ಶಿರಿಗಂಧ | ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ | ಮಾರ್ಪೆಸರು ಬಾರದಂತೆ | ಅರೆರೆ | ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ | ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ | ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ | ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ 3 ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ | ತೋಳ್ಮದವ ತೀರಿಸದೆ ಪೋಗದಿರು ಭಡಭಡಾ | ಕರವ ತೆಕ್ಕೊ | ಅರೆರೆ | ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ | ಸತಿ | ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ | ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ4 ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ | ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು | ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ | ಕಣ್ಗೊರಳ ಕುಚ ತೊಡೆಗಳ | ಅರೆರೆ | ಹೃತ್ತಾಪ ಹರಿಸುವ | ಸಿರಿ | ಸರ್ರನೆ ಓಕಳಿ ಚಲ್ಲೆ | ಸಣ್ಗೊಲ್ಲತಿಯರು ಬೆರಗಾಗಿ ಮರಳೆÀ ಹರಿಯ | ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ 6 ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ | ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ | ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ | ಜೀರ್ಕೋಳಲಿ ತೆರವಿಲ್ಲದೆ | ಅರೆರೆ | ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ | ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ | ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ | ತರ್ಕೈಪ ಭರದಿಂದ ನಾರಿಯರು ಇರಲು 7 ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ | ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ | ವಸ್ತುಗಳು ಜಿಗಳುವಂತೆ ಓಕುಳಿಯಿಂದ | ವಿಸ್ತಾರವಾಗಿ ಉಗ್ಗೆ | ಅರೆರೆ | ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ| ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪÀರ | ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು | ಮಸ್ತಕಾದ್ಯರು ವಿಸ್ತರಿಸಲರಿದೆನಲು 8 ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ | ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ | ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ | ಳುಕ್ಕೇರಿ ಬೆವರುತಿರಲು | ಅರೆರೆ | ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ | ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು | ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ | ದಕ್ಕಿವನಂತೆ ಸಂತರಿಸುತಲಿ ಇಂದೂ 9 ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ | ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ | ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ | ಮೀರ್ದಾಭರಣವ ತೊಡಿಸಿ | ಅರೆರೆ | ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ | ಸುಜನ ಜನಸಂಗಾ 10
--------------
ವಿಜಯದಾಸ
ಈ ಜೀವನಿಂದು ಫಲವೇನು |ರಾಜೀವಲೋಚನನ ಮರೆದಿಹ ತನುವಿನಲಿ ಪ.ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |ಗುರು - ಹಿರಿಯರ ಚರಣಕಮಲಕೆರಗಿ ||ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |ವೆರೆಯದೆ ಮರೆಹ ಈ ಪಾಪಿತನುವಿನಲಿ 1ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||ರನ್ನದುಡಿಗೆಯುಡಿಸಿ ರತುನಗಳಳವಡಿಸಿ |ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ 2ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |ಹೊಳೆವ ಕಿರೀಟ ಕೊರಳಲಿ ಪದಕ ||ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |ಕಳೆಯ ನೋಡಲರಿಯದ ಪಾಪಿತನುವಿನಲಿ 3ವರಭಕ್ಷ್ಯಗಳುಪರಮಾನ್ನ ಶಾಲ್ಯನ್ನವು |ವರವಾದ ಮಧುಘೃತ ಕ್ಷೀರವನ್ನು ||ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ - |ಎರಡು ಕೈಮುಗಿಯದ ಪಾಪಿತನುವಿನಲಿ 4ಉರಗಾದ್ರಿ - ಸ್ವಾಮಿಪುಷ್ಕರಣಿಗಳು ಮೊದಲಾದ |ಪರಿಪರಿ ತೀರ್ಥಗಳನೆಲ್ಲ ಮಿಂದು ||ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |ಚರಣವನು ಭಜಿಸಲಯದ ಪಾಪಿತನುವಿನಲಿ 5
--------------
ಪುರಂದರದಾಸರು
ಮುದ್ದು ತಾರೊ-ಕೃಷ್ಣ-ಎದ್ದು ಬಾರೊ |ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪಕಡೆಯುವ ಸಮಯಕೆ ಬಂದು ಕಡೆವಸತಿಯ ಕೈಯಪಿಡಿದು |ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆಮೆಲುವ ಬಾಯಲೊಮ್ಮೆ 1ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ 2ಪುರಂದರವಿಠಲನೆ ತೊರವೆಯ ನಾರಸಿಂಹ |ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ 3
--------------
ಪುರಂದರದಾಸರು