7. ನಾರಾಯಣಶರ್ಮರ ಹೆಚ್ಚಿನ ಕೃತಿಗಳು
(1) ರಾಮನುಜ ಸ್ತುತಿ
ಗುರುಸ್ತುತಿಯ ಮಾಡಬೇಕಯ್ಯ
ಗುರುವೆ ಗಮ್ಯ ತೋರುವನಯ್ಯ ಪ
ಗುರುವಿಂದ ಹರಿಪಾದ ಸುಲಭವಯ್ಯ
ಗುರುವಿಲ್ಲದೆ ಮೋಕ್ಷವಿಲ್ಲ ನೋಡಯ್ಯ ಅ.ಪ
ಗುರುನಮ್ಮಯತಿರಾಜ ರಾಮಾನುಜ
ಗುರುನಮ್ಮ ಕ್ಷಿತಿಪೂಜ್ಯ ಗೋದಾನುಜ
ಗುರುವೆ ಸರ್ವಸ್ವ ಹರಿಸ್ವರೂಪ
ಗುರುಪಾದ ದರ್ಶನವೇ ಸಾಯುಜ್ಯವೆನಿಪ 1
ದಾಸದಾಸರದಾಸರಾಳ್ವಾರರ ಪೋಷ
ದೋಷರಹಿತ ದಾಸೋತ್ತಮ ಧನು
ರ್ದಾಸನ ಶ್ರೀಪಾದತೀರ್ಥವ ಸೇವಿಸಿ
ದಾಸಸೇವೆಯೆ ಈಶ ಸೇವೆಯೆನಿಸಿದ 2
ಚೆನ್ನ ತಮಿಳಿನ ಶ್ರೀರಂಗದಿಂ ಬಂದು
ಚೆನ್ನಚೆಲುವಿನ ಮೇಲುಕೋಟೆಯಲಿ ನಿಂದು
ಹನ್ನೆರಡು ವರುಷದ ಮೇಲ್ಪಟ್ಟು ಸಂದು
ಇನ್ನಿಂದು ಜಾಜಿಪುರೀಶನಾದ ನಮ್ಮ3