ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ಭಾರತೀಶನೆ ಉದ್ಧರಿಸುವದೆನ್ನ ಪ ಕಂಸಾರಿ ಪ್ರೀಯ ಸಂ - ಸಾರ ಬಂಧನ ನಿವಾರಿಸೊ ಜವದಿ ಅ.ಪ ಅಂಜನಾದೇವಿಯ ಸಂಜಾತನೆ ಭವ ಭಂಜನ ಹರಿಪದಕಂಜಾರಾಧಕ 1 ಮಾರುತಿ ನಿನ್ನ ಸುಕೀರುತಿ ತ್ರಿಜಗದಿ ಸಾರುತಲಿದೆಯುದ್ಧಾರಕನೆಂದು 2 ಹರಿಕುಲಜಾತನೆ ಹರಿಸಂಪ್ರೀತನೆ ಹರಿಹಯ ವಿನುತನೆ ಹರಿದುರಿತವನು 3 ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ ಪ್ರೇಮವ ಕೊಡು ಶ್ರೀ ರಾಮನ ಪದದಿ 4 ಕುಂತಿ ಕುಮಾರಾದ್ಯಂತ ವಿದೂರನೆ ಅಂತರಂಗದಿ ಹರಿಚಿಂತನೆಯಕೊಡು 5 ಧರ್ಮಾನುಜಸದ್ಧರ್ಮ ಸ್ಥಾಪಕನೆ ಕಿರ್ಮೀರಾಂತಕ ನಿರ್ಮಲ ಚರಿತ 6 ಭೀಮನೆ ಸುದ್ಗುಣ ಧಾಮನೆ ಕುರುಕುಲ ಸೋಮನೆ ಸುರಮುನಿಸ್ತೋಮನಮಿತನೆ 7 ಅರ್ಜುನಾಗ್ರಜನೆ ದುರ್ಜನ ಶಿಕ್ಷಕ ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8 ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು ನಾರ್ಯಕುರುಪನೂರು ಶೌರ್ಯದಿ ತರಿದ 9 ಕರಿವರದನ ಚರಣಾರವಿಂದ ಯುಗ ನಿರುತ ಸ್ಮರಿಪತೆರ ಕರುಣಿಸು ಭರದಿ 10 ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ - ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11 ಮಧ್ಯಗೇಹ ಸುತ ಸದ್ವೈಷ್ಣವ ಯತಿ ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12 ಮಿಥ್ಯಾವಾದಿಬಾಯಿ ಎತ್ತದಂತ ಶ್ರು - ತ್ಯರ್ಥವ ಪೇಳ್ದ ಸಮರ್ಥನಹುದು ನೀ 13 ಹರಿಸರ್ವೋತ್ತಮ ಸಿರಿಯು ಅಕ್ಷರಳು ಸುರರೊಳು ನೀನೆ ಪಿರಿಯನು ಸತ್ಯ 14 ಸದಮಲಚರಿತನೆ ಹೃದಯದ ತಿಮಿರವ ವದೆದು ತರಿವುದಕೆ ಉದಿತ ಭಾಸ್ಕರ 15 ಮೂರು ರೂಪಾತ್ಮಕ ಸಾರಿದೆಯನ್ನಯ್ಯs ಪಾರದುರಿತ ಪರಿಹಾರವ ಗೈಸೊ 16 ಹೇಸಿಕೆ ಭವದಲಿ ನಾಶಿಲುಕಿಹೆ ವರ - ದೇಶ ವಿಠಲನ ಸೋಶಿಲಿ ತೋರೊ 17
--------------
ವರದೇಶವಿಠಲ
ಪವಮಾನ ರಾಯಾ ಪಾವನ ಕಾಯಾ | ಕಾಯೋದಿವಿಷತ್ಪೂಜಿತ ಕವಿಜನ ಗೇಯ ಪಭಕ್ತವತ್ಸಲ ದೇವ ರವಿತೇಜ | ಸರ್ವೋ-ದ್ರಕ್ತ ಪ್ರಣತ ಜನ ಸುರಭೂಜ||ಶಕ್ತ ಲೋಕೈಕ ಅನಂತಜ |ಭುಕ್ತಿಮುಕ್ತಿದ ದಿತಿಜಾಹಿ ದ್ವಿಜರಾಜ1ದುರಿತಾಂಬುಧಿ ಘಾಗಜ ಕಾಳೀಶ | ಸರ್ವಸುರವಂದ್ಯ ಪದಕಂಜ ನಿರ್ದೋಷಾ ||ಪುರರಿಪುಪಿತ ಪಯೋಧರ ಭಾಸ | ಸಾರೆ-ಗರೆದು ಪೂರ್ತಿಸೊ ಯನ್ನ ಅಭಿಲಾಷಾ 2ಪೌಲಸ್ತ್ಯಾನುಜ ಮಾಠ ರಜ ರಕ್ಷ | ಶ್ರೀ ಗೋ-ಪಾಲನವನೆನೀಸುವದುಪೇಕ್ಷ ||ನೀಲೇಶ ತ(?)ಮಾಡದೆ ತಾ ರಕ್ಷ | ವಂದ್ಯಕಾಲಿಗೆರಗುವೆ ದುರ್ಜನ ಶಿಕ್ಷ3ಮಧುಸಖ ಪಾಲಾನುಜ ಪಾದಾರವಿಂದ |ಮಧುಕರ ದಂಡ ಮೇಖಲ ಧಾರ ||ವಿದುರಾಗ್ರಜ ನಂದನ ಸಂಸಾರಾರಣ್ಯ |ಸುಧನಂಜಯ ವೃಕೋದರ ಸಮೀರ4ಕುಟಿಲರಹಿತ ಋಜುಗಣಾಧೀಶ | ಶ್ರೀ ಧೂ-ರ್ಜಟಿವಂದ್ಯ ಭಕ್ತಿಯಿಂ ಪ್ರಾಣೇಶ ||ವಿಠಲನ್ನ ಭಜಿಸುತ್ತ ಸದ್ಭಾಷ್ಯವನ್ನು |ಪಠನೆ ಮಾಡಿಸೊ ದಯದಿಂದ ನಿಶಾ 5
--------------
ಪ್ರಾಣೇಶದಾಸರು