ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀಹರಿಯ ಮೋಹಿನಿ ರೂಪ) ನೋಡಿರೊ ಸ್ತ್ರೀರೂಪವ ನೋಡಿರೋ ಪ. ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ ಮಾಡಿರೊ ಮಹಿತಾ ಪ್ರತಾಪ ಅಹ ಜೋಡಾದ ಸತಿಯರ ನೋಡಿ ನಗುತ ನಲಿ- ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ. ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ 1 ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು ಮಂದರ ಕಟ್ಟಿ ನಿಂದು ಸುಧ ಸಾರವ ತೆಗೆಯಲು ಕಾರುಣ್ಯದಲಿ ದಾನ ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು 2 ನಾಯಕ ಧೀರ ಕಂಜ ನಿವಹ ರಕ್ಷಿಸು ಗಂಭೀರಾ ಅಹ ಪವನಾವತಾರನ ಸ್ತವನಕೊಲಿದು ಬಂದ ಕವಿ ಶೇಷಗಿರಿವಾಸ ಭವಭಯಹಾರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲಾಪರಾಧವೈಯ್ಯಾ ಹರಿಪ್ರೀತಿ ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾ ಪ. ಸಾಧುಲಿಂಗವ ಧರಿಸಿ ವೇದ ವೇದಾಂತ ಸ- ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು ಓದಿದರು ಸರ್ವಶಾಸ್ತ್ರ ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ ಕೈದಿ ತಪಗೈದರು ಮಹಾದಾನಿಯಾದರು ವಿ- ರಾಧವಧ ಪಂಡಿತನ ಪಾದಕರ್ಪಣ ವಿನಹ ಬಾಧಿಸದೆ ಬಿಡದು ಜನ್ಮ 1 ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ- ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು ನರಕ ಸ್ವರ್ಗದ ಭ್ರಮಣವು ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ ಗರದಿ ತೇಲಾಡುವುದನರಿಯದತಿ ದುರ್ಮೋಹ ಸೆರೆಯೊಳಗೆ ಬಿದ್ದ ಮೇಲೆ 2 ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ ಸಾರ್ವಭೌಮಸುನಾಮ ಸಾಮಗಾನಪ್ರೇಮ ದೂರ್ವಾದಳಶ್ಯಾಮ ದುರ್ಗಾರಮಣ ಜಗವ ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ ಕೊರ್ವನೆ ಹೃಷೀಕೇಶ ಕೇಶವ ದೈತ್ಯ ಪೂರ್ವಕವೆ ನಿರಪರಾಧ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಾಪರಾಧವೈಯ್ಯಾ ಹರಿಪ್ರೀತಿ ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾಪ. ಸಾಧುಲಿಂಗವ ಧರಿಸಿ ವೇದ ವೇದಾಂತ ಸ- ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು ಓದಿದರು ಸರ್ವಶಾಸ್ತ್ರ ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ ಕೈದಿ ತಪಗೈದರು ಮಹಾದಾನಿಯಾದರು ವಿ- ರಾಧವಧ ಪಂಡಿತನ ಪಾದಕರ್ಪಣ ವಿನಹ ಬಾಧಿಸದೆ ಬಿಡದು ಜನ್ಮ 1 ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ- ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು ನರಕ ಸ್ವರ್ಗದ ಭ್ರಮಣವು ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ ಗರದಿ ತೇಲಾಡುವುದನರಿಯದತಿ ದುರ್ಮೋಹ ಸೆರೆಯೊಳಗೆ ಬಿದ್ದ ಮೇಲೆ 2 ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ ಸಾರ್ವಭೌಮಸುನಾಮ ಸಾಮಗಾನಪ್ರೇಮ ದೂರ್ವಾದಳಶ್ಯಾಮ ದುರ್ಗಾರಮಣ ಜಗವ ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ ಕೊರ್ವನೆ ಹೃಷೀಕೇಶ ಕೇಶವ ದೈತ್ಯ ಪೂರ್ವಕವೆ ನಿರಪರಾಧ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ನಾರಾಯಣ ಸನ್ನುತ ಸುಗುಣ ಗುಣಾರ್ಣವ ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ ಲೋಕೇಶ ವಿಧಾತಜನಕ ರ ತ್ನಾಕರಮಥನ ಜಗದಾಘಪಹ ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ ಆಕಾಶ ತರಂಗಿಣಿ ಪಿತ ಕರುಣಾಕರ ಕೌಮೋದಕಿಧರ ಧರಣಿ ಕುವರಾಂತಕ ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ 1 ಅರದೂರಾಬ್ಜ ಭವಾಂಡೋದರ ಶರಣಾಗತ ಸವಿ ಪಂಜರ ಅಂ ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ ಕರಿವರ ಪ್ರಭಂಜನ ಪೀತಾಂ ಬರಧರ ಖಳಕುಲವನ ವೈಶ್ವಾ ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] 2 ಸತ್ವರಜಸ್ತಮ ಜೀವರ ತತ್ ಸಾಧನವರಿತವರಗತಿ ಗ ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು ಉತ್ತಮ ಪುರುಷನೆ ಚೇತನ ಜಡದ ತ್ಯಂತವಿಭಿನ್ನ ವಿಜಯ ಸಖ ಸತ್ಯಸುಕಾಮ ಕಮಲನಯನನೆÉ ಚಿತ್ತೈಸೊ [ಹಸೆಗೆ]3 ವಾಸವತನುಸಂಭವ ಸಾರಥಿ ವೀಶುದ್ಭುಜ ವಿಧೃತ ಸುದರ್ಶನ ದಶಾರ್ಹ ದಿವಕರನಿಭ ಸಂಕಾಶÀ ಸುಭದ್ರಾತ್ಮಾ ವಾಸುಕಿ ಪರ್ಯಂಕಶಯನ ಹರಿ ವ್ಯಾಸಕಪಿಲ ದತ್ತಾತ್ರಯ ಮಹಿದಾಸ ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]4 ಪಾಂಡವ ಸಖ ಪತಿತ ಸುಪಾವನ ಚಂಡಾಂಶು ನಿಶಾಕರ ಪಾವಕ ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ ಕುಂಡಲ ಮಂಡಿತ ಗಂಡಸ್ಥಳ ಖಂಡಮಹಿಮ ಖೇಚರ ಪುರಹರ ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]5
--------------
ಜಗನ್ನಾಥದಾಸರು
ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ಶ್ರೀಮದನಂತನೀತಾ ಶ್ರೀಮದನಂತನೀತಾ | ಸೀಮರಹಿತಾ ಮಹಿಮನೀತಾ | ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ ಶ್ರೀಮದಾನಂತನೀತನು ಪ ಆದಿದೈವನೀತಾ ಜೀವಾದಿಗಳಿಗಭಯದಾನೀತಾ | ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ | ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ | ನಿತ್ಯ ಸಾಧುಗಳ ಕಾಯಿದನೀತಾ1 ಗಜವರದನೀತಾ ಗಂಗಜನ ಮನೋಭೀಷ್ಟನೀತಾ | ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ | ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ | ಪಂಕಜ ಬಾಂಧವನ ಭಾಸನೀತಾ2 ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ | ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ | ದ್ರುಪದಸುತೆಯ ಕಾಯದನೀತಾ ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ3 ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ | ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ | ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ | ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ4 ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ | ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ 5
--------------
ವಿಜಯದಾಸ
ರಕ್ತಾಕ್ಷಿ ಸಂವತ್ಸರ ಸ್ತೋತ್ರ156ಶರಣು ಶರಣು ರಕ್ತಾಕ್ಷಿ ವರ್ಷದ ಸ್ವಾಮಿ ಶ್ರೀ ನರಸಿಂಹನೇಶರಣು ದುರ್ಗಾರಮಣ ಜಗಜ್ಜನ್ಮಾದಿ ಕಾರಣ ಪಾಹಿಮಾಂ ಪಸರಸಿಜಾಸನ ಶಿವ ಶಕ್ರಾದಿ ಸುರಸುವಂದಿತ ಪಾದನೇಶ್ರೀ ರಮಾಯುತನಾಗಿ ನೀ ಸಂವತ್ಸರದ ನಾಯಕರೊಳುಇರುತ ಪ್ರಜೆಗಳ ಯೋಗ ಕ್ಷೇಮವ ವಹಿಸಿಪೊರೆವಿ ದಯಾನಿದೇ 1ರಾಜ ಸೋಮನು ಮಂತ್ರಿ ಭೃಗು ಸೇನಾಧಿಪತಿ ಬೃಹಸ್ಪತಿಪ್ರಜ್ವಲಿಪರ ವಿಸಸ್ಯನಾಯಕಶನಿಯು ಧಾನ್ಯ ಅಧಿಪನುರಾಜರಾಜೇಶ್ವರನೆ ನಿನ್ನ ಆಜÉÕಯಿಂದ ಚರಿಪರು 2ಶರಣು ಭಕ್ತರ ಕಾಯ್ವ ಕರುಣಾವಾರಿವಿಧಿನೀ ಸರ್ವದಾತರಿದು ಪಾಪವ ಪುಣ್ಯ ಒದಗಿಸಿ ಭಕ್ತಿ ಜ್ಞÕನ ಆಯುಷ್ಯಆರೋಗ್ಯವಿತ್ತು ಕಾಯೋಅಜಪಿತಪ್ರಸನ್ನ ಶ್ರೀನಿವಾಸನೇ3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶಿವ74ಸೋಮಶೇಖರ ಶಿವನೆ ಹೈಮವತಿವರ ನಿನ್ನತಾಮರಸಪದಯುಗಳಕಾ ನಮಿಪೆ ಕಾಯೋಪಕಾಮಹರ ಸ್ಕಂಧಪಿತ ಅಮರೇಂದ್ರ ಮುಖವಿನುತರಾಮ ನರಹುದಾಸ ಅಮರತಟನೀಧರನೆ ಅಪರುದ್ರನೇ ನಮೋ ಎನ್ನುಪದ್ರವಗಳನು ತರಿದುಭದ್ರವನು ಇಟ್ಟೆನ್ನ ಉದ್ಧರಿಸೊ ದಯದಿರುದ್ರ ಭವಬಂಧಹರ ದುರ್ಗಾರಮಣನಾದಪದ್ಮಭವತಾತನಿಗೆ ಪ್ರಿಯತರನೆ ತ್ರಿಪುರಾರಿ 1ಈಶ ಶಿವ ಮಹದೇವ ಈಶಾನ ನಮೋ ನಿನಗೆವಾಸವಾದ್ಯಮರ ಜಗದ್ಗುರುವೆ ಶರಣೆಂಬೆಈಶ ಕೇಶವ ದೋಷದೂರ ಸುಖಮಯ ಶ್ರೀಶದಾಶಾರ್ಹನಲಿ ಎನ್ನ ಮನವ ಚಲಿಸದೆ ನಿಲಿಸೊ 2ತೀರ್ಥಪಾದನು ಸರ್ವ ಚೇತನರ ದೇಹಸ್ಥಕೃತ್ತಿವಾಸನು ಶ್ರೀ ಪ್ರಸನ್ನ ಶ್ರೀನಿವಾಸಕೃತಿಜಯಾಶ್ರದ್ಧೇಶ ಸಹ ಜ್ವಲಿಪ ನಿನ್ನೊಳಗೆಕೃತ್ತಿವಾಸನೆ ನಮೋ ಶುಭದಪಾರ್ವತೀಶ3
--------------
ಪ್ರಸನ್ನ ಶ್ರೀನಿವಾಸದಾಸರು