ಅರ್ತರಿಯದ್ಹಾಂಗೆ ಇರಬೇಕು ಮತ್ರ್ಯದೊಳಗೆ ಧ್ರುವ
ಬಡಿವಾರ ಸಲ್ಲದು ತಾ ಅಹಂಕಾರ
ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ 1
ತರ್ಕತೆ ದೋರಲು ಖೂನ ಅತ್ರ್ಯುಳ್ಳವರ ನಿಧಾನ
ಸರ್ಕನೆ ತಿಳಿವದು ಖೂನ ತಾರ್ಕಣ್ಯದ ಧನ 2
ಹಲವು ಮಾತಾಡಿದಂತೆ ಬಲುವಾ ಭಾವದೋರಿತು
ನೆಲೆಯು ಗೊಳಬೇಕು ತಿಳುವಂತೆ ಎಲಿಮರಿಕಾಯಂತೆ 3
ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ
ಅಲ್ಲಹುದೇನು ತಾ ವಿಚಾರ ಬಲು ತುಂಬ್ಯಾದ ಸ್ಥಿರ 4
ಬೆರ್ತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು 5