ಒಟ್ಟು 24 ಕಡೆಗಳಲ್ಲಿ , 17 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬಾಳಿದರೇನು ಆರು ಬದುಕಿದರೇನುನಾರಾಯಣನ ಸ್ಮರಣೆ ನಮಗಿಲ್ಲದನಕ ಪ ಉಣ್ಣ ಬರದವರಲ್ಲಿ ಊರೂಟವಾದರೇನುಹಣ್ಣುಬಿಡದ ಮರಗಳು ಹಾಳಾದರೇನುಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನುಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು 1 ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನುಹೊಕ್ಕು ನಡೆಯದ ನಂಟತನದೊಳೇನುರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನುಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು 2 ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನುಬಲ್ಪಂಥವಿಲ್ಲದವನ ಬಾಳ್ವೆಯೇನುಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನಸ್ವಲ್ಪವೂ ನೆನೆಯದ ನರನಿದ್ದರೇನು 3
--------------
ಕನಕದಾಸ
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1 ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಕೇಳೆಲವೊ ಮರ್ಕಟ 2 ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಶ್ರೀ ಹರಿಯ ದಯಮಾಡ 3 ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಬೋಧ ಮೈ ಮರೆತಿರಬೇಡಾ 4 ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಲಜ್ಜೆಯ ಈಡ್ಯಾಡೊ5 ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ | ಬೀಳುವಿ ಯಮಗೊಂಡಾ 6 ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ಕೂಗೆಲವೊ ಬಾಯಿ ತೆರೆದು 7
--------------
ವಿಜಯದಾಸ
ಕಟಹತರಿದಾರ್ಭಟದಿ ಭಕುತರಪಟಲ ಪಾಲಿಪ ರಘುವರಪ್ರೀಯಭಟನೆನಿಪ ಮರ್ಕಟ ಕುಲೋತ್ತಮಗುರು ಕುಲೋತ್ತಮನೆ ಭೂಸುರರ ಜಠರದೊಳುಮರಳಿ ನೀನವತರಿಸೀಹರಿವಿರೋಧಿಗಳನ್ನು ಮುರಿಯೆ ಸನ್ಯಾಸ ತಾಳಿಪರಮ ಗುರುಗಳೆನಿಸೀಗುರು ಇಂದಿರೇಶನೆ ಪರನೆಂದರುಹಿನಿಂದುವರ ಮಾಯಿಗಳ ಜಯಿಸೀ ಧಿಕ್ಕರಿಸೀಧರಣಿಯೊಳು ಸುಗುಣೇಂದ್ರಯತಿಗಳಕರದಿ ಪೂಜಿತ ಮೂಲರಾಮರದರುಶನದಿ ಸುಖ ಸುರಿಸಿ ಸರ್ವರಧರೆಯೋಳ್ ಪಾಮರ ನರರ ಪಾಲಿಪೆ
--------------
ಗುರುಇಂದಿರೇಶರು
ಕವಿತಾರಸದ ಸೊಬಗ ಕವಿಗಳೆ ಬಲ್ಲರಲ್ಲದೆಯುವತಿಯರು ಕವಿಯ ಹೃದಯವ ಕಂಡರುಂಟೆ ಪ ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿಯಗೂಗೆ ಬಲ್ಲುದೆ ಸೂರ್ಯನುದಯವನ್ನುರೋಗಿ ಬಲ್ಲನೆ ಸುಧಾರಸದ ಸುಸ್ವಾದವನುಭೋಗಿ ಬಲ್ಲನೆ ಯೋಗಮಾರ್ಗ ರೀತಿಯನು 1 ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನುಹೊನ್ನಿದ್ದರೇನು ಲೋಭಿಯ ಕೈಯಲಿಹೆಣ್ಣಿದ್ದರೇನು ಪೌರುಷವಿಲ್ಲದ ನರಗೆಪುಣ್ಯಹೀನಗೆ ಕನಕಶಿಲೆಯಿದ್ದರೇನು 2 ಗಾನರಸಮಾಧುರ್ಯವನು ಬಧಿರಬಲ್ಲನೆಆನೆ ಬಲ್ಲುದೆ ಚಂದನದ ರಸವನುಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ. ಮರ ಹಾರುವಂಥ ಮರ್ಕಟಕುಲದಲವತರಿಸಿ ಶರಧಿ ಲಂಘಿಸುತ ದ್ವೀಪಾಂತರವಾಸಿ ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ ಕರದಿ ಎಂಜಲು ಕೊಂಡು ಮರವನೇರಿದನೆ 1 ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ ಹಿತವೆ ರಕ್ಕಸಿ ಸಂಗ ಪಥದಿ ನಿನಗೆ ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ 2 ತುಳುವಂಶಜನೆ ನೀ ಲಲನೆ ಸಂಗವ ತೊರೆದು ಅಲೆದೆ ಯತಿಯಾಗಿ ಈ ಇಳೆ ಎಲ್ಲವ ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ ಒಲಿಸಲೋಡಿದೆ ಆರು ಬರದಂಥ ಗಿರಿಗೆ 3
--------------
ಅಂಬಾಬಾಯಿ
ಕೇಳೆ ನಂದನ ಕಾಂತೆ ಹೇಳೆ ಮಗಗೆ ಬುದ್ದಿ ಬಾಲೆಯರನು ಇರಗೊಡನೆ ದಮ್ಮಯ್ಯ ಪ ಕುತ್ತಿಗೆಯೊಳಗಣ ಮುತ್ತಿನ ಸರಗಳ ಕಿತ್ತು ಹರಿದು ಚೆಲ್ಲಿ ಪೋದ ದಮ್ಮಯ್ಯ 1 ಕಟ್ಟಿದ ಕರುಗಳ ಬಿಟ್ಟು ಒಲೆಯ ಮೇಲೆ ಇಟ್ಟ ಪಾಲ್ಗಳನೆಲ್ಲ ಕುಡಿದ ಗೋಪಮ್ಮ 2 ಪಿಕ್ಕದೊಳಿಹ ಬೆಣ್ಣೆ ಚೊಕ್ಕನೆಲ್ಲವ ಮೆದ್ದು ಮರ್ಕಟಗಳಿಗಷ್ಟನಿತ್ತ ದಮ್ಮಯ್ಯ 3 ಬೇಡವೆಂದರೆ ಛಲಗೇಡಿ ಹಿಡಿದು ಎನ್ನ ನೋಡಿ ಮೋಸವ ಮಾಡಿ ಹೋದ ದಮ್ಮಯ್ಯ 4 ಮರುತಾತ್ಮಜ ಕೋಣೆ ಲಕ್ಷ್ಮೀರಮಣಗೊಮ್ಮೆ ನಾರಿ ನೀ ಬುದ್ದಿಯ ಹೇಳೆ ದಮ್ಮಯ್ಯ 5
--------------
ಕವಿ ಪರಮದೇವದಾಸರು
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ತಂದೆ ಮುದ್ದು ಮೋಹನ್ನ ತವ ಚರಣ ಕಾನಮಿಪೆಬಂದೆನ್ನ ಸಲಹ ಬೇಕೋ ಪ ಎಂದೆಂದಿಗೂ ನಿಮ್ಮ ಪದ ಧ್ಯಾನವಿತ್ತು ಭವಬಂಧನವ ಬಿಡಿಸಬೇಕೋ | ಕರುಣೀ ಅ.ಪ. ಅಂಕಿತವನಿತ್ತೆ ಮನಪಂಕ ಹರಿಸೀ ಹರಿಕಿಂಕರರ ಸಂಗ ಸಲಿಸೋ |ಸಂಕಟವ ಪರಿಹರಿಪ ವೆಂಕಟೇಶನ ಪಾದಪಂಕಜಕೆ ಮಧುಪ ನೆನಿಸೋ |ಶಂಕೆಗಳು ಎಂದೆನಿಪ | ಸೊಂಕು ಜಾಡ್ಯವ ಹರಿಸೆಡೊಂಕು ಮನ ವೈದ್ಯನೆನಿಸೋ |ಮಂಕುಮತಿಯಾದೆನಗೆ ಅಕಲಂಕ ಮಹಿಮನನಲೆಂಕತನವನೆ ಇತ್ತು ಕಾಯೋ | ಕರುಣೀ 1 ಪರಿ ಮಾನವ ಎನ್ನ | ಮರುಕದಿಂದಲಿ ನೋಡಿವಿರಕುತಿಯನಿತ್ತು ಸಲಹೋ | ಕರುಣೀ 2 ಲೆಕ್ಕವಿಲ್ಲದ ದೇಹ ಗೇಹಾದಿಗಳ ಪೊಕ್ಕುಸಿಕ್ಕಿನಿಂದಲಿ ನೊಂದೆನೋ |ಕಕ್ಕಸದ ಸಂಸಾರ | ಅಕ್ಕರವು ಎಂದೆನುತಮರ್ಕಟನ ತೆರನಾದೆನೋ |ಸೊಕ್ಕು ಮೂರೈದನ್ನ | ಮುಕ್ಕಿ ಕಾಡುತ್ತಿರಲುನಕ್ಕು ನೀ ನೋಳ್ಪುದೇನೋ |ಪಕ್ಕಿವಹ ದೇವ ಗುರು ಗೋವಿಂದ ವಿಠ್ಠಲನಅಕ್ಕರದಿ ತೋರಯ್ಯಾ | ಕರುಣೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1 ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2 ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3 ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4 ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5 ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6 ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7 ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8 ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9 ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10 ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಧ್ರುವ ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1 ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2 ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3 ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4 ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5 ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6 ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾವನೀ ಆವಹಿ ಮಾಂ ಪ ಪಾವನಿ ಪಾತಕಾರಣ್ಯ ಮಹಾ ಪಾವಕÀ ನೀನಾದ್ಯೊ ಘನ್ನ ಆಹಾ ಆವಕಾಲದಲ್ಲಿ ಭಾವಜಜನಕನ ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ ಪ್ರಾಣಾದಿ ಪಂಚರೂಪಕನೆ ಸುರ ಗಣ ಕರಾರ್ಚಿತ ಪಾದಯುಗನೆ ಗುಣ ಗಣನಿಧಿ ಬಾರತೀಧವನೇ ಜಗ ತ್ರಾಣ ಕಾರಣನೆ ಮಾರುತನೇ ಆಹಾ ಚಾರು ಚ ರಣ ವಂದಿಪೆ ಜಗತ್ಕಾರಣಕರ್ತನೇ 1 ಖದ್ಯೋತ ಶತ ನಿಭ ಚರಣಾ ಅನಾದ್ಯ ಹರಣ ಸದ್ಯ ವಿದ್ಯೋತ ವೇದಾಂತಾಭರಣಾ ಅನ ವಧ್ಯ ಸ್ವಭಕ್ತಾಂತಃ ಕರಣಾ ಆಹಾ ವಿದ್ಯಾರಮಣ ನೀನೆ ಸದ್ಯೋಜಾತಗೆ ಸು ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2 ಶ್ರೀನಾಥನಿಗೆ ಪ್ರತೀಕಾ ಬಾಲ ಭಾನುಕೋಟಿ ಪ್ರಕಾಶಾ ಏನು ಕರುಣಾಳೊ ಭಕ್ತಾಭಿsಲಾಷಾ ಅನು ಸಾರದಿ ಪೂರ್ತಿಪ ಈಶಾ ಆಹಾ ಹನುಮದಾದಿರೂಪ ಘನವಾಗಿ ಧರಿಸಿ ನೀ ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3 ಸೂತ್ರನಾಮಕ ಶುಭಗಾತ್ರಾ ಚಿತ್ರ ಚಂiÀರ್i ಪಿತಾಮಹಪುತ್ರಾ ಗೋತ್ರ ಧರಮುಖ ದ್ಯು ಸ್ವಕÀಲತ್ರಾ ಮಿತ್ರ ತಾಡನ ಹರ್ತ ಅರ್ಥಗಾತ್ರಾ ಆಹಾ ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4 ಘೋಟ ಖೇಟ ಕಂಠೀರವ ವದನಾ ಭವ ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ ರ್ಕಟ ರೂಪನೆ ನಿನ್ನಾ ಭಕ್ತ ಕೋಟಿಯೊಳಗೆ ಸೇರಿಸೆನ್ನಾ ಆಹಾ ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5
--------------
ಗುರುಜಗನ್ನಾಥದಾಸರು
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲುಬಲವನು ದುರ್ಗುಣಕೆ ಹತ್ತಬಹುದೇಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆಬಳಿಕ ಜನನ ಮರಣ ಮುತ್ತಬಹುದೆ ಪ ಬಹು ಬೆಳಕು ಬೆಳಗಲು ಮನದ ಮರ್ಕಟವದುಮರವ ನೇರದೆ ಕೆಳಗೆ ನಿಲ ಬಲ್ಲುದೆಬಹು ಕಾಮವೆಂಬ ಕಾಗೆ ಕಣ್ಣುಡುಗಲುಗೂಡಿನಿಂದಾ ಹೊರಗೆ ಬರಬಲ್ಲದೆ1 ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆಚೆಂಡಾಡದೆ ತಾನು ಸುಮ್ಮನಿಹುದೆಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆಪಂಚ ವಂಚಕರು ಓಡದಿಹರೆ2 ಒಲಿದರೆ ತೇಜವು ಅವಿದ್ಯದ ಕತ್ತಲೆಯುತಾನೋಡದೆ ಅಲ್ಲಿ ನಿಲಬಲ್ಲುದೆಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆಬಹಳ ಜನ್ಮದ ಪಾಪ ಹರಿಯದಿಹುದೇ3
--------------
ಚಿದಾನಂದ ಅವಧೂತರು
ಭಾವವಿಲ್ಲದ ಬಯಲ ಭಜನೆಗೆ | ದೇವನೆಂದಿಗು ವಲಿಯನು | ಈ ವಿಷಯ ಫಲದಾಸೆ ಮನದೊಳು | ಭಾವಿಸುತ ವೃತ ತಪಗಳ್ಯಾತಕೆ ಪ ಮೀನು ನೀರೊಳಗಿದ್ದರೇನೈ | ಧ್ಯಾನವನು ಬಕ ಮಾಡಲು | ಮೌನದಲಿ ಕೋಗಿಲೆಯು ಇದ್ದರ | ದೇನು ವನವಾಶ್ರಯಿಸಿ ಮರ್ಕಟ 1 ಉರಗ ಪವನಾಹಾರ ಭಸ್ಮವ | ಖರ ವಿಲೇಪನ ಮಾಡಲು | ತರು ದಿಗಂಬರವಾಗಿ ಮಂಡುಕ | ಕೊರಳೊಳಕ್ಷರ ಜಪಿಸಲೇನದು 2 ಮೂಷಕ ಗುಹ್ಯಲಿರಲೇ | ನರಿತು ಗಿಳಿ ಮಾತಾಡಲು | ಗುರು ಮಹಿಪತಿ ಬೋಧವಾಲಿಸಿ | ಹರಿಯ ಭಾವದಿ ನಂಬಿ ಸುಖಿಸಿರೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುತ್ತೂರೇಶ ಶ್ರೀ ಮರ್ಕಟಾ ತುಲಸÀದಲಾಯತಾಕ್ಷ ಶ್ರೀರಾಮದೂತಾ ಪ ಎತ್ತ ಚಲಿಸದಂತೆನ್ನ ಮನವ ತವ ಪಾದ ಸರೋಜದೊಳಿಟ್ಟು ಪತ್ತು ತಲೆಯನರಿಯಡಿದಾವರೆಯನು ನಿತ್ಯ ಭಜಿಸುವಂದದಿ ಮಾಡಯ್ಯ 1 ಆಂಜನೇಯಾ ಭೀಕರ ರೂಪಾ ದಾನವ ಘಾತಕರಾ ಸತಿ ಮೇದಿನಿ ಸುತೆಯಳ ಮಂಜುಮಾಡಿ ಖಲ ರಾವಣನೊಯ್ಯಲು ಅಂಜದಿರೆಂದವನಿಪ- ನಿಗಭಯವಿತ್ತು ಮಂಜುಂ ಕಾರ್ಯವ ನೆರೆದಪೆನೆಂದೀ 2 ಭಾರತೀಯ ಪವÀನತನಯ ಘನತರ ಕಾರ್ಯಕರ್ತಾ ಶ್ರೀರಾಮದೂತಾ ಘೋರತರದ ಅಪರಾರ್ಣವನು ಹಾರಿ ದಾಂಟಿ ಲಘು ದಶಮುಖಪುರವನು ವೀರರಾಘವನಂಘ್ರಿಗೆ ಎರಗಿದಿ ನೀ 3 ದಾನವನಾಶಾ ಜಾನಕೀತ್ರಾತ ದಶರಥಸುತ ಭಜಕಾ ಆನಂದತೀರ್ಥ ದಾನವ ಕೋಟಿಯ ನಡೆದು ಜವದಿ ನೀ ಮೌನಿ ಹರಿಗೆ ಸಹಾಯಾಗ್ರಣಿಯಾಗಿ ಹೀನ ರಕ್ಕಸ ದಶ- ಶಿರವನರಿಸಿ ನೀ ನರಸಿಂಹವಿಠಲನ ದಾಸನೆನಿಸಿದೀ 4
--------------
ನರಸಿಂಹವಿಠಲರು
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು 1 ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಶ್ರೀ ಹರಿ ದಯಮಾಡಾ 2 ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ ಜ್ಞಾನಿಗಳೊಡನಾಡು ಕಂಡ್ಯಾ ವಿಷಯ ಬೀಳುವಿ ಯಮಕೊಂಡಾ 3 ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಮೈಮರೆದಿರ ಬ್ಯಾಡಾ4 ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಕೇಳೆಲವೋ ಮರ್ಕಟ 5 ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಲಜ್ಜೆಯನೀಡ್ಯಾಡೋ6 ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು 7
--------------
ವಿಜಯದಾಸ