ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಹೊಳೆವುತದೆ ಸುಚಿನ್ಹಬೋಧ ತಂದಿ ಕಂಡೆವೇನೊ ಸದ್ಗುರು ಶ್ರೀಪಾದ ಧ್ರುವ ಪ್ರಾಣದೊಡಿಯ ಬಾವ್ಹಾಂಗನೇನೊ ಪೂರ್ಣಕ್ಷಣಕೊಮ್ಮಾಗುತದೆ ಸುಶಕುನ ಕಣ್ಹುಬ್ಬಾರುತದೆ ಬಲದೆನ್ನ ಚೆನ್ನಾಗ್ಯಾಗಮ್ಮ ತಾನೇನೊ ಸುಪ್ರಸನ್ನ 1 ತೋಳಭುಜಹಾರುತದೆ ಬಲುಬಹಳ ವ್ಯಾಳ್ಯಕೊದಗಿಬಂದೆನೇನೊ ದಯಾಳ ಸುಳವುದೋರುತದೆ ನಿಶ್ಚಳ ಸುಳಿದೊಮ್ಮೆ ಬಂದನೇನೊ ಕೃಪಾಳ 2 ಬುದ್ಧಿ ಮನಸಿಗಾಗುತದೆ ವಿಕಾಸ ಸಿದ್ಧಿಸೋರುವ್ಹಾಗಾದೆ ಪ್ರಕಾಶ ಸದ್ಯ ಹೃದಯವಾಗುತದೆ ಉಲ್ಹಾಸ ಸಾಧ್ಯವಾಗುವ್ಹಾಂಗ್ಹಾನೇನೊ ತಾ ಸರ್ವೇಶ 3 ಪ್ರೇಮ ಉಕ್ಕಿಬರುದೆನ್ನೊಳಗೆ ಸ್ವಾಮಿದರುಷಣಾದೀತೇನೊ ತಾ ಈಗ ರೋಮರೋಮವು ಬಿಡದೆ ಎನಗೆ ಬ್ರಹ್ಮಾನಂದ ಭಾಸುತದೇನೊ ಬ್ಯಾಗ 4 ಖೂನದೋರಿಬರುತದೆನಗೊಂದು ಭಾನುಕೋಟಿ ತೇಜ ತಾ ಬಾವ್ಹಾಂಗಿಂದು ದೀನ ಮಹಿಪತಿಗುರು ಕೃಪಾಸಿಂಧುಮನೋಹರ ಮಾಡುವ್ಹಾಂಗ್ಹಾನೆ ಬಂದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆ ಕೊ ಪಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯ ತಾನು ಕಂಡನು ಹರುಷದಲಿ 1ದಾರಿಯಲಿ ಬಹ ಮುರವೈರಿಯ ಕಾಣುತ |ಹಾರುತ ಚೀರುತ ಕುಣಿಯುತಲಿ ||ವಾರಿಧಾರೆಯನು ನೇತ್ರದಿ ಸುರಿಸುತ |ಬಾರಿಬಾರಿಗೆ ಹಿಗ್ಗುವ ಸುಖದಿ 2ಆಟಕೆ ಲೋಕಗಳೆಲ್ಲಾ ಸೃಜಿಸುವ |ನಾಟಕಧರ ತನ್ನ ಲೀಲೆಯಲಿ ||ನೀಟಾದವರ ಮನೆಗಳ ಜರೆದು |ಕುಟೀರದಲಿ ಬಂದುಹರಿ ಕುಳಿತ3ಅಡಿಗಡಿಗೆ ತನ್ನ ತನುಮನ ಹರಹಿ |ಅಡಗೆಡೆಯುತ ಬಲು ಗದ್ಗದದಿ ||ನುಡಿಗಳ ತೊದಲಿಸಿ ರೋಮವ ಪುಳಕಿಸಿ |ದುಡುದುಡು ಓಡುವ ದಶದಿಶೆಗೆ 4ಕಂಗಳುದಕದಿ ಪದಂಗಳ ತೊಳೆದು |ಗಂಧವ ಪೂಸಿದ ತನುಪೂರಸಿ ||ಮಂಗಳ ಮಹಿಮನ ಚರಣಕೆರಗಿ ಪು-ಷ್ಪಂಗಳಿಂದ ಪೂಜೆಯ ಮಾಡಿದನು 5ನೋಡಿದ ಭಕುತನ ಮನದ ಹವಣಿಕೆಯು |ಪಾಡುವ ಪೊಗಳುವ ಹರುಷದಲಿ ||ನೀಡಿದ ಕರದಲಿ ಬಿಗಿದಪ್ಪಿದ ಕೊಂ -ಡಾಡಿದ ಕರುಣದಿ ಜಗದೊಡೆಯ 6ಕ್ಷೀರವಾರಿಧಿ ಶಯನಗೆ ವಿದುರನು |ಕ್ಷೀರವನುಣ ಬಡಿಸಿದ ನೋಡಾ ||ವಾರಿಜನಾಭನು ಕರಸಂಪುಟದಲಿ |ಆರೋಗಣಿಸಿದ ಘನತೆಯನು 7ಒಂದು ಕುಡಿತೆ ಪಾಲುಹರಿ ತಾ ಸವಿದು |ಮುಂದಕೆ ನಡೆಸಿದ ಧರೆಮೇಲೆ ||ಇಂದಿರೆಯರಸನ ಚರಿತೆ ವಿಚಿತ್ರವು |ಚೆಂದದಿ ಹರಿದುದು ಬೀದಿಯಲಿ 8ಕರುಣಾಕರ ಸಿರಿಹರಿ ತನ್ನ ಭಕುತರ |ಪೊರೆವನುಅನುದಿನ ಆಯತದಿ ||ಸಿರಿಯ ಅರಸು ನಮ್ಮಪುರಂದರ ವಿಠಲನ |ಶರಣರು ಧನ್ಯರು ಮೇಲೆ 9
--------------
ಪುರಂದರದಾಸರು