ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುಸರಿ ಮಾರುತಿಯೆ ನಿನಗೆ ಆರುಯೆಂಟು ಭುವನದೊಳಗೆ ಪ ಎತ್ತಿ ತೂಗಿದಿ ಶಿವನಪುರಿ ಕಿತ್ತು ತಂದಿ ಸಂಜೀವನ ಗಿರಿ ಮತ್ತೆರಕ್ಕಸಬಲವ ತೂರಿ ಮುತ್ತಿ ತರಿದೋ ಹಾರಿ ಹಾರಿ1 ಲಂಘಿಸಿ ಬಲವಂತ ಭರದಿ ಲಿಂಗ ತಂದು ಸಮರ್ಪಿಸಿದಿ ಮಂಗಳಾತ್ಮನಿಂದ ಪಡೆದಿ ಲಿಂಗಕೋಟಿ ರೋಮರೋಮದಿ 2 ನಾಮಬಲವ ಗಳಿಸಿದಿ ಈ ಮಹಭವಸಾಗರ ತುಳಿದಿ ಭೂಮಿಗಧಿಕ ಸ್ವಾಮಿ ಶ್ರೀ ರಾಮನೊಲಿಸಿ ಧನ್ಯನಾದಿ 3
--------------
ರಾಮದಾಸರು
ಈತ ಅಂಜನೆಸುತನು ಭೀಮರಾಯನು ಪ. ಈತ ರಾಮರ ಬಂಟನು ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ. ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ ಹನುಮರಾಯನು 1 ವಂಚನಿಲ್ಲದೆ ಮಾಡಿದ ವನವ ಕಿತ್ತನು ಭೀಮರಾಯನು 2 ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ ಭೀಮರಾಯನು 3 ವೀರರ ಗೆಲಿದ ಶೂರನು ಭೀಮರಾಯನು 4 ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು ಭೀಮರಾಯನು 5
--------------
ಹೆಳವನಕಟ್ಟೆ ಗಿರಿಯಮ್ಮ
ಹರಿಯೇ ಗತಿ ಭರ್ತನು ಜಗಕೇ|ನರ ಹರಿಯೇ ನೆಂಟ ಭಕುತ ಜನಕೇ ಪ ಆರು ಸಲಹುವರ ನಾಥ ದೀನಜನ| ಘೋರಪಾತಕಿ ಬಧಿರಾಂಧರನು| ವಾರಿಜಾಸನ ಮುಖ್ಯ ದೇವತೆಗಳಲಿ|ವಿ ಚಾರಿಸೆ ಅನ್ಯದೊರೆಗಳುಂಟೆ 1 ಕಮಲ ಬಾಂ ಧವ ವರುಣರು ಮೃತ್ಯುಗಳೆಲ್ಲ| ಭಾವಿಸೆ ನೇಮದಲಿರುತಿಹರು 2 ಅವನ ರೋಮರೋಮದಿ ಬ್ರಹ್ಮಾಂಡವು | ಅವುದುಂಬರ ಫಲದಂತಿಹುದು | ಭುವನದಿ ಗುರುಮಹೀಪತಿ ಸ್ವಾಮಿಯು ಜಗ ಕಾವ ಕೊಲುವ ನಿರ್ಮಿಸುತಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು