ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ಯನ್ನ ಯೋಗಧುರ್ಯನ್ನ ಭಜಿಸಿವರ್ಯನ್ನ ಮಧ್ವಾಚಾರ್ಯನ್ನಪ. ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ 1 ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ 2 ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ 3
--------------
ವಾದಿರಾಜ
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ 157 ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಕೃತಿ ನಡೆಸಿ ಶರಣರ ಕಾಯ್ವ ಪ ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1 ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2 ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆಮುಟ್ಟಲಿ ಬಂತೆ ಬಿಕನಾಶಿಪಮುಟ್ಟೋ ನೀನೇ ಮಡಿಯೂ ನೀನೇಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆಕಡೆಯಲಿ ಆ ಉದಕವನೇ ತರುವೆದೇವರಿಗಿಂದಭಿಷೇಕವ ಮಾಡುತಅಹಂನ ಬಿಡು ನಿನ ಬಿಕನಾಶಿ1ಎಲುಬು ಚರ್ಮದಿ ಮಲಮೂತ್ರದ ಗೂಡಲಿನಲಿಯುತಲಿದ್ದೆ ಬಿಕನಾಶಿನೆಲೆಗೊಂಡಾ ನವ ದ್ವಾರದ ಜಲದೊಳುತೊಳಲುತ ಬಿಕನಾಶಿ2ಹುಟ್ಟುತಸೂತಕಹೊಂದುತಸೂತಕನಟ್ಟ ನಡುವೆ ಬಿಕನಾಶಿಪಟ್ಟಣದಾ ಕಾವೇರಿ ಮುಳುಗಲುಮುಟ್ಟು ತೇಲಿಯಿತೆ ಬಿಕನಾಶಿ3ಉತ್ತಮ ಹತ್ತಿ ಬತ್ತಿರಲಾಂಜನವೃಕ್ಷದಿ ಬೆಳೆವುದೆ ಬಿಕನಾಶಿಉತ್ತಮ ರೋಧನ ಭಾರವ ಕೆಡಿಸಲುಕೆಟ್ಟಿತು ನಿನ ಮಡಿ ಬಿಕನಾಶಿ4ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನುಹೀನವ ಬಿಡು ನಿನ್ನ ಬಿಕನಾಶಿನಾನಾ ಶಾಖದಲಿ ಇರಲಾದರೂರ್ವಿಅದುರುಚಿತಿಳಿವುದೆ ಬಿಕನಾಶಿ5ಚರ್ಮವು ತೊಳೆದರೆ ಕರ್ಮವು ಹೋಯಿತೆಕರ್ಮವು ಬಿಡದು ನಿನ್ನ ಬಿಕನಾಶಿಒಮ್ಮೆ ಚಿದಾನಂದ ಪಾದವ ಸ್ಮರಿಸಲುನಿರ್ಮಲವಾದೆಯ ಬಿಕನಾಶಿ6
--------------
ಚಿದಾನಂದ ಅವಧೂತರು