ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ಕ್ಷಮಾಸಮುದ್ರನೆ ನಮಾಮಿ ಗುರು ನಿನ್ನ ಸಮಾನರ್ಯಾರಿನ್ನೂ |ಪ|| ಕಮಲ ಭ್ರಮರ ತವಪದ | ನಮಿಸುವೇ ಅ.ಪ. ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕಗೀತಾರ್ಥ ಸಂಗ್ರಹ ಕೃತೇ ನಮೋ |ಪ್ರತ್ಯರ್ಥಿಮತ್ತೇಭ ಪಂಚಾಸ್ಯ ನಿನ್ನಯಭೃತ್ಯನ ಅಪಮೃತಿ ತಪ್ಪಿಸಿದೇ 1 ಅದ್ವೈತ ದುಸ್ಸಹ ವಾಸನ ನಿರಸನಖದ್ಯೋತ ಸಮ ವ್ಯಾಪ್ತ ಪರಿಮಳಾ |ಸದ್ವೈಷ್ಣ್ವ ಕುಮುದೇಂದು ವಿದ್ವಾಂಸನತ ಪದದ್ವಂದ್ವಾ ವಿಮಲ ಕಮಲಾ 2 ಕುಷ್ಠಾದಿ ರೋಗಹರ ಕಷ್ಟ ನಿವಾರಣಶ್ರೇಷ್ಠ ನಿಮ್ಮಯ ಸ್ಮರಣಾ |ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ ದುಷ್ಟವಾದಿಯ ದಮನಾ3 ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣಬಾಹ್ಲೀಕ ಸೂನಾದೆ ಪ್ರತೀಪಗೆ |ವಿಹ್ವಲ ಹೃದಯರ ಚಂದ್ರಿಕೆಯಿಂದಲಿಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 4 ಸದನ ಗುರುವೇ |ಮಂತ್ರಾಗಮ್ಯ ಗುರು ಗೋವಿಂದ ವಿಠಲನಅಂತರದಿ ತೋರಿಸಿ ರಕ್ಷಿಸಯ್ಯಾ 5
--------------
ಗುರುಗೋವಿಂದವಿಠಲರು
ಪಾದ - ಮೋದದಿ ಭಜಿಸಿದ ಮನುಜನೆ ಬಲು ಧನ್ಯನೋ ಪ ಬೋಧ ಪಾದ ಸೇವಕರಾದ ಮಹಸುಸ್ವಾದಿ ಪುರದೊಳು | ವೇದ ವಿನುತನ ಸ್ತುತಿಸಿ ಮೋದಿಪ ಅ.ಪ. ವಾಗೀಶ ಮುನಿಪ ಸದಾಗಮಜ್ಞನ ವರ | ವೇಗದಿಂದಲಿ ಫಲಿಸಲುಜಾಗು ಮಾಡದೆ ಗೌರಿ ತತ್ಪತಿ | ರಾಗ ರಹಿತರು ನಿನ್ನನೊಪ್ಪಿಸೆ |ರೋಗಹರ ಹಯವದನ ಪದವನು | ರಾಗದಿಂದಲಿ ಭಜಿಪ ಯತಿ 1 ತಿಮಿರ ತಾಮರಸ ಬೋಧ ಶಾಸ್ತ್ರವ | ಪ್ರೇಮದಿಂದಲಿ ಪೇಳ್ದಯತಿವರ 2 ಮೂರ್ತಿ ಪ | ರಾಕ್ರಮನಿಂ ತರಿಸೀಚಕ್ರಿಯನೆ ನಿಲಿಸ್ಯುತ್ಸವದಿ ಸುರಪನ | ವಿಕ್ರಮದ ಆಳ್ಬಂದು ಕರೆಯಲು |ಉತ್ಕ್ರಮಣ ತೊರೆದವರ ಕಳುಹುತ | ವಿಕ್ರಮನ ಪದಕೆರಗಿನಿಂದ3 ನಿಗಮವೇದ್ಯನ ಬಗೆಬಗೆಯಲಿ ಸಂಸ್ಕøತ | ಮಿಗಿಲು ಪ್ರಾಕೃತ ಪದ್ಯದೀಸುಗುಣಮಣಿಮಯ ಮಾಲೆಗಳ ಪ | ನ್ನಗನಗೇಶನ ಕೊರಳೂಳರ್ಪಿಸಿ |ಚಿಗಿ ಚಿಗಿದು ಆನಂದದಿಂದಲಿ | ದೃಗು ಜಲದಿ ಹರಿಪದವ ತೊಳೆದ 4 ಸುರನದಿ ನದಿಧರರಾದಿ ಸ್ಥಾಪಿಸುತಲ್ಲಿ | ಎರಡೆರಡೊಂದು ವೃಂದಾವನವಾ | ಸ್ಥಿರಪಡಿಸಿ ಶ್ರೀವ್ಯಾಸ ಸಮ್ಮುಖ | ವರ ನರೇಯಣ ಭೂತಬಲದಲಿಇರಿಸಿ ಗುರು ಗೋವಿಂದ ವಿಠಲನ | ನಿರುತ ಧ್ಯಾನಾನಂದಮಗ್ನ5
--------------
ಗುರುಗೋವಿಂದವಿಠಲರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ರಂಗ ಬಂದನೋ ಮೋಹನಾಂಗ ಬಂದನೋ ರಂಗ ಬಂದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ ಪ ಭೋಗಿಶಯನ ಭವರೋಗಹರಣ ನಿಗಮಾ ಗಮಗನುತ ಶರಣಾಗತ ಪೋಷ 1 ಮಂದರಧರ ಮುಚುಕುಂದವರದ ರಾಕೇಂದುವದನ ಗೋವಿಂದ ಮುಕುಂದ 2 ತಾಪಸವಂದಿತ ಶ್ರೀಪತಿ ಘನ ಹೆನ್ನೆಪುರ ನರಹರಿ ಭೂಪರಿಪಾಲನ 3
--------------
ಹೆನ್ನೆರಂಗದಾಸರು
ರೋಗಹರನೇ ಕೃಪಾಸಾಗರ ಶ್ರೀ ಗುರು ರಾಘವೇಂದ್ರ ಪರಿಪಾಲಿಸೊ ಪ ಸಂತತ ದುರ್ವಾದಿ ಧ್ವಾಂತ ದಿವಾಕರ ಸಂತವಿನುತ ಮಾತ ಲಾಲಿಸೊ 1 ಪಾವನಗಾತ್ರ ಸುದೇವವರನೆ ತವ ಸೇವಕ ಜನರೊಳಗಾಡಿಸೊ 2 ಘನ್ನ ಮಹಿಮ ಜಗನ್ನಾಥವಿಠಲ ಪ್ರಿಯ ನಿನ್ನಾರಾಧನೆ ಮಾಡಿಸೊ 3
--------------
ಜಗನ್ನಾಥದಾಸರು
ಸಕಲ ಗ್ರಹಬಲ ನೀನೆ ಸರಸಿಜಾಕ್ಷ |ನಿಖಿಳವೇತಕೆ ಎನಗೆ ವಿಶ್ವವ್ಯಾಪಕ ಮೋಹಿ ಪರವಿಚಂದ್ರಬುಧನೀನೆರಾಹುಕೇತುವು ನೀನೆಕವಿಗುರುವು ಶನಿಯು ಮಂಗಳನು ನೀನೆ ||ದಿವಸ ರಾತ್ರಿಯು ನೀನೆ ನವವಿಧಾನವು ನೀನೆಭವರೋಗಹರ ನೀನೆ ರಕ್ಷಕನು ನೀನೆ 1ಪಕ್ಷಮಾಸವು ನೀನೆ ಪರ್ವಕಾಲವು ನೀನೆನಕ್ಷತ್ರಯೋಗ ಕರಣಗಳು ನೀನೆ ||ಅಕ್ಷಯವೆಂದು ದ್ರೌಪದಿಯಮಾನವಕಾಯ್ದಪಕ್ಷಿವಾಹನ ದೀನ ರಕ್ಷಕನು ನೀನೆ 2ಋತು ಕಾಲಗಳು ನೀನೆ ವ್ರತದಿನಂಗಳು ನೀನೆಕ್ರತುವುಸಂಧ್ಯಾನಸದ್ಗತಿಯು ನೀನೆಜಿತವಾಗಿ ಎನ್ನೊಡೆಯಪುರಂದರವಿಠಲನೆಶ್ರುತಿಗೆ ನಿಲುಕದ ಮಹ್ಮಾತ್ಮನು ಹರಿಯು ನೀನೆ 3
--------------
ಪುರಂದರದಾಸರು