ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ
ಕರ ಪಿಡಿಯೊ ಬೇಗಾ ಪ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1 ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2 ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3 ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4 ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5
--------------
ಗುರುಗೋವಿಂದವಿಠಲರು
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ. ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ 1 ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 2 ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಸಾಕು ವಿಷಯ ಸುಖ ಲೋಕೇಶ ಜಗ ದೇಕನಾಥ ಕೊಡು ತವಧ್ಯಾಸ ಪ ಬೇಕು ನಿನ್ನಪಾದ ಭಯನಾಶ ಭವ ನತ ಪೋಷಅ.ಪ ಮಸಣ ಬುದ್ಧಿ ಬೇಗ ಪರಿಹರಿಸು ಜವ ನಶಿಸಿ ಪೋಗುವ ಮಾಯ ಮೋಹ ಬಿಡಿಸು ಅಸಮ ಸತ್ಯಪಥದೆನ್ನ ನಡೆಸು ಎನ್ನ ರಸನೆಯಿಂದ ನಿನ್ನ ನಾಮ ನುಡಿಸು ಒಸೆದು ನಿನ್ನವರೊಳಗೆನ್ನಾಡಿಸು ನಿನ್ನ ವಶಿಕಪತ್ರ ಬೇಗ ದಯಪಾಲಿಸು 1 ಚಿತ್ತವಗಲದಂತೆ ಸ್ಥಿರಮಾಡು ನಿಜ ಭಕ್ತಿ ಕದಲದಂಥ ದೃಢ ನೀಡು ಸತ್ಯಸಮಾಗಮ ಸತತ ಕೊಡು ದೇವ ನಿತ್ಯ ನಿರ್ಮಲಮನ ದಯಮಾಡು ಹತ್ತಿದ ಪಾಪರಾಸಿ ಕಡೆಮಾಡು ನಿನ್ನ ಭೃತ್ಯನೆಂದೆನ್ನನು ಕಾಪಾಡು2 ನಿನ್ನ ಮರೆಯ ಬಿದ್ದು ಭಜಿಸುವೆನು ನಾ ನನ್ಯ ದೇವರ ಗುರುತರಿಯೆನು ನಿನ್ನವನೆಂದೆನಿಸೆನ್ನನು ಕಳಿ ಭವ ರೋಗವನು ಎನ್ನಯ್ಯ ಶ್ರೀರಾಮ ನಿನ್ನ ನಂಬಿದೆನು ನೀಡು ಉನ್ನತ ಮುಕ್ತಿ ಸಾಮ್ರಾಜ್ಯವನು 3
--------------
ರಾಮದಾಸರು
ಸುಂದರ ವದನಾ ಸುಂದರ ನಯನಾ ಸುಂದರಾನನಾ ಸುಂದರವಾಣಿಯೇ ಪ ಬಂದಿಹ ಮಹಾರೋಗವನು ಕಳೆವುದೀಗಳೇ ಸುಂದರ ತನು ನಿನಗಿದೇನು ಅಸದಳವೇ ಅಂತು ನಿನ್ನನೆ ಬೇಡುವೆನೀಗಳೇ ವಿಶ್ವ ವಿಶಾಲಾ ಇಂದೇ ನೆಲಸೆನ್ನಲಿ ನರಸಿಂಹವಿಠ್ಠಲಾ 1
--------------
ನರಸಿಂಹವಿಠಲರು
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ1 ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು 2 ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ಮøತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ 3 ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ 4 ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು