ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ
ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ
ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ
ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ-
ಯನು ತಾತಂದು ಕೊಡಿಸಿ
ಮನುಮಥನಾಟವೆಘನ ಬೋಧೆಯೆನ್ನಿಸಿ
ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1
ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ
ಅತಿದ್ವೇಷವೇ ಕೊಟ್ಟಳು
ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ
ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2
ಇತರ ಚಿಂತೆ ಹೋಯ್ತು ಕುಲದಪ-
ಧ್ಧತಿಯ ಮರಿಯ ಲಾಯ್ತು
ಹಿತವೇ ಪೇಳಿದರ ಹಿತವಾಗಿ ತೋರುವೆ 3
ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ
ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ
ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4
ಸ್ಮರನಾಟಯಾವಾಗಲು ಅವಳನೋಡಿ
ಕರಗುತ್ತ ಹಗಲಿರುಳು
ಪರಗತಿ ಕೊಡುವಂಥ ಗುರುರಾಮ ವಿಠಲನೆ
ಅರಿಯವ ಸಂಸಾರ ತೊರೆದು ತುಂಟರಾಗಿ 5