ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಯತಿಗಳೊಳಗೆ ಸದ್ಗತಿ ನೀನೇ ಗುರುವರಾ ಯತಿವರ ರಾಘವೇಂದ್ರ ಪ ವತಿಯಿಂದ ನಿನ್ನ ನಾಮವೇ ಗತಿಯೆನಿಪಗೆ ಮತಿಯಿತ್ತು ವಿರಸ ಸಂಸ್ಕøತಿಯಿದುದ್ಧರಿಪೆನೀ ಅ.ಪ. ಮಧ್ವಮುನಿಯ ಕರುಣಾಬ್ಧಿಯ ಚಂದ್ರನೆ ದಯಾರಸ ಸಾಂದ್ರನೆ ಶುದ್ಧ ಪಶುವೆನಿಸಿದೆ ತಿಳಿಯದೆ 1 ನಿನ್ನ ನಾಮವ ಪಠಿಪರಿಗೆ ಸರ್ವರೋಗಗಳಿಗೆ ಹಾವಳಿಗಳಿಗೆ 2 ಸರಸ ತೀರ್ಥ ಪ್ರಸಾದವೆ ಸದ್ಗತಿ ಮೃತ್ತಿಕೆಯೇ ಮುಕುತಿ ಪ್ರೀತಿ ನಿನ್ನಲಿ ಭಕ್ತಿ 3
--------------
ನರಸಿಂಹವಿಠಲರು
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ- ಯನು ತಾತಂದು ಕೊಡಿಸಿ ಮನುಮಥನಾಟವೆಘನ ಬೋಧೆಯೆನ್ನಿಸಿ ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1 ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ ಅತಿದ್ವೇಷವೇ ಕೊಟ್ಟಳು ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2 ಇತರ ಚಿಂತೆ ಹೋಯ್ತು ಕುಲದಪ- ಧ್ಧತಿಯ ಮರಿಯ ಲಾಯ್ತು ಹಿತವೇ ಪೇಳಿದರ ಹಿತವಾಗಿ ತೋರುವೆ 3 ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4 ಸ್ಮರನಾಟಯಾವಾಗಲು ಅವಳನೋಡಿ ಕರಗುತ್ತ ಹಗಲಿರುಳು ಪರಗತಿ ಕೊಡುವಂಥ ಗುರುರಾಮ ವಿಠಲನೆ ಅರಿಯವ ಸಂಸಾರ ತೊರೆದು ತುಂಟರಾಗಿ 5
--------------
ಗುರುರಾಮವಿಠಲ