ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಮಾಡಲಿ ಎನ್ನ ರೋಗಕೆ ರಾಮ ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ ನಿತ್ಯ ಮಾಡುವ ಜಪತಪ ನಿಂತಿತು 1 ಯಾರಾರೇನೆಂದುದೆಲ್ಲವ ಮಾಚಿತು ಅದು ನಡೆಯೆಕಾಲುಬತ್ತಿತು ಶರೀರದೊಳಗೆ ಕ್ಷೀಣವಾಯಿತು 2 ವಾಂತಿ ಭ್ರಾಂತಿಗಳೆರಡಾಯಿತು ರೋಗ ಕಮಲಕಂಡಿತು ಕಾಲ ಬಂತೊ ಎಂಬಂತೆ ಮನವಾಯಿತು 3 ಹಿಂದೆ ಮಾಡಿದ ಪಾಪ ಬಂದಿತು ಈಗ ಮನದಿಹಂಬಲವಾಯಿತು ಇನ್ನು ಎಂದನೆಂದರೆ ದನಿ ಕುಂದಿತು 4 ಕಾಮನಯ್ಯನ ಚಿಂತೆ ಬಂದಿತು ರೋಗ ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು 5
--------------
ಕವಿ ಪರಮದೇವದಾಸರು
ಗುರುಮಧ್ವಮುನಿರಾಯಾ ಎನಗೊಂಬೊದಗಿದಾನು ಸಹಾಯ ಪ ಕತ್ತಲೆ ಕವಿದಿತ್ತು ಸುತ್ತಲೆ ಕಾಣದಂತೆ ಇತ್ತು ಬಟ್ಟೆ ದೃಶ್ಯವಿತ್ತು ಮತ್ತುರೆ ಭವತಮ ಸುತ್ತಲೆ ಮುಸುಕಿರೆ ಉತ್ತಮಾನಂದತೀರ್ಥ ಬಿಡು ಉದಯಸಿದಾ 1 ಹರಿಬೀಜಾವರಿ ಅಲ್ಲಾ ಧರೆಯೊಳು ಸದ್ಗತಿ ದೊರಿಲಿಲ್ಲಾ ಗುರುವೇ ಇರಲಿಲ್ಲಾ ಧರೆಯೊಳು ಹರಿಯನಾವ ಬಲ್ಲ ಸುರರೊಳು ಸುರತರುವರ ವಾಡ ಸೂನು ಧರೆಯೊಳವತರಿಸಿ ಹರಿಪಥ ತೋರಿದಾ 2 ಎಲ್ಲ ರೋಗಕೆ ಮದ್ದು ಸಲ್ಲುವದಿವರ ನಾಮ ಮುದ್ದು ಹುಲ್ಲಜನರ ಸದ್ದು ನಿಲ್ಲದೆ ಪೋದಿ ತಡವಿ ಬಿದ್ದು ಬಲ್ಲಿದ ನರಸಿಂಹ ವಿಠಲನ ನೆನೆಯಲು ಎಲ್ಲ ಕಾಮಿತಫಲ ನಿಜವೆಂದರುಹದಾ 7
--------------
ನರಸಿಂಹವಿಠಲರು
ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು ಪರಿ ನೆಲವನುಳಲಿಬೇಕು 1 ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು 2 ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ 3
--------------
ವಿದ್ಯಾಪ್ರಸನ್ನತೀರ್ಥರು
ಮಧ್ವರಾಯರ ಚರಿತೆ ಕೇಳಲು ಶುದ್ಧವಾಯಿತು ಜನತೆ ಪ ತಿದ್ದಿತೆಲ್ಲರ ನಡತೆ ಸುಲಭದಿ ಲಬ್ಧವಾಯಿತು ಘನತೆ ಅ.ಪ ಉತ್ತಮ ದಿವಿಜರ ಸತ್ಸಭೆಗಳಲಿ ನಿತ್ಯ ಪಾಡುವ ಕಥೆ ಮರ್ತ್ಯಲೋಕದ ಮದ ಮತ್ಸರ ರೋಗಕೆ ಪಥ್ಯಮಾಡುವವರಿಗೆ ಉತ್ತಮವೀ ಕಥೆ 1 ಇಲ್ಲಿಯ ಜೀವನ ಅಲ್ಲಿಗೆ ಸಾಧನ ಎಲ್ಲಿಯು ಭೇದವ ತೋರಿದರು ಕ್ಷುಲ್ಲಕ ಮತಗಳ ಬೆಲ್ಲದ ವಚನವು ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ 2 ಹರಿ ಗುರು ಕೃಪೆಯಿದು ಮರುದಂಶರ ಮೈ ಮರೆಸುವ ಚರಿತೆಯು ಹರಿದುದು ಶ್ರವಣದೊಳ ದುರಿತವು ತೊಲಗಿತು ಪರಮ ಪ್ರಸನ್ನನ ಪರಮ ಪದದ ರುಚಿಯರಿತರು ಸುಜನರು 3
--------------
ವಿದ್ಯಾಪ್ರಸನ್ನತೀರ್ಥರು
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ
ಕೆಡಿಸುವನಲ್ಲೊ ನೀ ಬಲು ಕರುಣಿ ನನ್ನಕಿಡಿಗೇಡಿತನ ಉಣಿಸಿತು ಭವಣಿ ಪ.ಹುಸಿಯ ನುಡಿದು ದೆಸೆಗೆಟ್ಟವ ನಾ ನನ್ನಕುಶಲ ಕಲ್ಯಾಣದೊಳಿಟ್ಟ ಕರುಣಿ ನೀಅಸಮ ಚಂಚಲ ಚಿತ್ತವುಳ್ಳವ ನಾ ದುವ್ರ್ಯಸನವಿದಾರಿ ಉದಾರಿಯು ನೀ 1ಹಗಲರಿತ ಕುಳಿಯೊಳ್ಬಿದ್ದವ ನಾ ಎನ್ನನೆಗಹಿ ನೆಗಹಿ ನೆಲೆಗೊಟ್ಟವ ನೀಬಗೆ ಬಗೆ ದೋಷಾಚರಣ್ಯೆವ ನಾ ಮತ್ತಘ ಸಂಚಿತವನೋಡಿಸುವೆ ನೀ 2ವಿಷಯದ ಬಯಕೆಲಿ ನವೆದವ ನಾ ಶುದ್ಧಭೇಷಜನಾಗಿಹೆ ಭವರೋಗಕೆ ನೀವಿಷವನುಂಡು ಕಳೆಗೆಡುವವ ನಾ ಪೀಯೂಷವನೆರೆವ ದಯಾವಾರಿಧಿ ನೀ 3ಅಹಂಕಾರದಲಿ ಬೆರೆತಿದ್ದವ ನಾಶುಭವಹ ನಾಮವನಿತ್ತು ತಿದ್ದುವೆ ನೀಮಹಿಯೊಳಗಮಿತಘ ಸಾಧಕ ನಾ ಎನ್ನಬಹುಕಲುಷವನ ದಾಹಕ ನೀ 4ಕೆಡಿಸಬೇಕಾದರೆ ತಿರ್ಯಗ್ಯೋನಿಯ ನೀಬಿಡಿಸಿ ವೈಷ್ಣವ ಜನ್ಮಕೆ ತಹೆಯಾಒಡೆಯ ಪ್ರಸನ್ವೆಂಕಟ ದಯಾಳು ನಿನ್ನಒಡಲ ಹೊಕ್ಕವನೆಂದು ನಂಬಿನೆಚ್ಚಲು 5
--------------
ಪ್ರಸನ್ನವೆಂಕಟದಾಸರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು