ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮವದು ಹ್ಯಾಗಿದೆಬ್ರಹ್ಮ ಕೇಳ್ವನ ಹಾಗಿದೆಬ್ರಹ್ಮವದು ಹೀಗೆಂದು ತೋರಲಿಕೆ ಶಕ್ಯವೇ ಪ ಬ್ರಹ್ಮವದು ಶೂದ್ರನೇಬ್ರಹ್ಮವದು ಭದ್ರನೇಬ್ರಹ್ಮವದು ರುದ್ರನೆಂದು ತೋರಿಸಲು ಶಕ್ಯವೇ 1 ಬ್ರಹ್ಮವದು ಯಂತ್ರವೇಬ್ರಹ್ಮವದು ತಂತ್ರವೇಬ್ರಹ್ಮವದು ಮಂತ್ರವೆಂದು ತೋರಿಸಲು ಶಕ್ಯವೇ 2 ಬ್ರಹ್ಮವದು ರೊಟ್ಟಿಯೇಬ್ರಹ್ಮವದು ಪುಟ್ಟಿಯೇಬ್ರಹ್ಮವದು ಹೊಟ್ಟೆಯೆಂದು ತೋರಿಸಲು ಶಕ್ಯವೇ 3 ಬ್ರಹ್ಮವದು ಜೋಳಿಗೆಬ್ರಹ್ಮವದು ಮಾಳಿಗೆಬ್ರಹ್ಮವದು ಹೋಳಿಗೆ ಎಂದು ತೋರಿಸಲು ಶಕ್ಯವೇ 4 ಹೇಗಿದೆಂದು ಕೇಳ್ವಡೆಹೀಗೆದೆಂದು ಪೇಳ್ವಡೆಹೇಗೆ ಹೀಗೆ ಎಂಬುದಕ್ಕೆ ಚಿದಾನಂದನ ನೋಡಿದೆ 5
--------------
ಚಿದಾನಂದ ಅವಧೂತರು
ವಿಠಲನ ನಾಮ ಮರೆತು ಪೋದೆನಲ್ಲ ಲಟಪಟ ನಾ ಸಟೆಯಾಡುವೆನಲ್ಲಪ ಶೇಷಗಿರಿಯ ಮೇಲೆ ಸವುತೆಯ ಬಿತ್ತಿದೇವಗಿರಿಯ ಮೇಲೆ ಅವತಾರವಿಕ್ಕಿಹಾಳೂರಿನೊಳಗೊಬ್ಬ ಕುಂಬಾರ ಸತ್ತಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1 ಆ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ 2 ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆಕಪ್ಪೆ ತತ್ಥೈ ಎಂದು ಕುಣಿವುದ ಕಂಡೆಬಾಡದಾದಿಕೇಶವನ ಕಣ್ಣಾರೆ ಕಂಡೆ3
--------------
ಕನಕದಾಸ
ತಾಳಿಯ ಹರಿದು ಬಿಸಾಡೆ ನೀಹೇಳಿದವರ ಮಾತ ಕೇಳೇ ಗೈಯ್ಯಾಳಿ ಪ.ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮಬುಲ್ಲ ಮಹಿಸಾಸುರ ದೈವವೆಂದೆಎಲ್ಲ ದೈವಗಳು ನಾಯಾಗಿ ಹರಿವಾಗಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ 1ಕೊರಳೊಳು ಕವಡಿಯ ಶಿರದಲಿ ಹಡಲಿಗೆಕರದಲಿ ದೀವಟಿಗೆ ಉರಿಸುತಲಿಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿತಿರುಗಿದ ಕೇರಿಗುಂಟ ಮೂಳಿ 2ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡುಒಡೆಯ ಮಲ್ಲಣನೆಂದು ಜೋಲಾಡುಕಡುಹರಿ ಯಮದೂತರು ಬಂದು ಎಳೆವಾಗಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ 3ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡುಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡುಮಿಂಡೆ ಮೈಲಾರಿಯ ಖಂಡೆರಾಯನೆಂದುಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ 4ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟುನನ್ನಯ್ಯ ನಾಗಪ್ಪ ಸಲುಹೆನ್ನುತಚಿನ್ನನಾಗರ ಬಂದು ಓಡಾಡಿ ಕಡಿವಾಗಹೊನ್ನನಾಗರ ಎತ್ತ ಹೋದನೆ ಮೂಳಿ 5
--------------
ಪುರಂದರದಾಸರು
ಯಶೋದೆ ನಿನ್ನ ಮಗಗಿದು ಥರವೇವಸುಧೆಯೊಳಗಿಂಥ ಶಿಶುವಿಲ್ಲವೇ ಪಪೆಟ್ಟಿಗೆಯೊಳುತುಂಬಿರೊಟ್ಟಿಯ ದೇವರು |ಇಟ್ಟನೆ ಕಚ್ಚಿನ ಚಟ್ಟಿಗೆಯೊಳು 1ಸಡಗರದಿಂದ ಬೆಣ್ಣೆ ಗಡಿಗೆ ಕಾಯಲಿಟ್ಟರೆ |ಬಡಧಾನ ಕೇದಿಗೆ ಪಡಿಯೊಳಗೆ2ಆ ಸಣ್ಣ ಕರು ತೊಟ್ಟಿಲ ಹಾಸಿಕೆಯೊಳಗಿಟ್ಟು |ಕೂಸು ಸೋರಿಯೊಳಿಟ್ಟುಘಾಸಿಮಾಳ್ಪ 3ಚಿನ್ನಗುಣಲಿಟ್ಟರೆ ಅನ್ನದೊಳಗಿಟ್ಟನೆ |ಸುಣ್ಣದಕಲ್ಲು ಏನ್ಮಣ್ಣು ಹೇಳಲಿ 4ನಿದ್ರೆಯೊಳಿರೆ ಸೀರೆ ಒದ್ದಲ್ಲಿ ಬೆಣ್ಣೆಯ |ಮುದ್ದೀನಿಡುವನಿದು ಮುದ್ದುಯೇನೆ 5ಬೆಕ್ಕಾನಲ್ಲಿಗೆಹಚ್ಚಿಇಕ್ಕಿಸಿ ಚಪ್ಪಾಳೆ |ಇಕ್ಕಿಸುವನೆಹಿಂಡುಚಿಕ್ಕವರನ್ನಾ 6ನನ್ನ ಪ್ರಾಣೇಶ ವಿಠಲನ್ನಾಟ ಈ ಊರೊಳು |ಘನ್ನವಾಯಿತು ಬಿಡಿಸಿನ್ನು ಮಾತ್ರ 7
--------------
ಪ್ರಾಣೇಶದಾಸರು
ಲಟಪಟ ನಾ ಸಟೆಯಾಡುವೆನಲ್ಲ |ವಿಠಲನ ನಾಮ ಮರೆತು ಪೋದೆನಲ್ಲ ಪ.ಶೇಷಗಿರಿಯ ಮೇಲೆ ಸವುತೆಯ ಬಿತ್ತಿ |ದೇವಗಿರಿಯ ಮೇಲೆ ಅವತಾರವಿಕ್ಕಿ ||ಹಾಳೂರಿಗೊಬ್ಬ ಕುಂಬಾರ ಸತ್ತ |ಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1ನಾ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆ ||ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ |ನರಸೂಳೆಗೆಯ್ವುದ ಕಣ್ಣಾರೆ ಕಂಡೆ 2ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆ ||ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ |ಪುರಂದರವಿಠಲನ ಕಣ್ಣಾರೆ ಕಂಡೆ * 3
--------------
ಪುರಂದರದಾಸರು