ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊರೆಯೊ ಶ್ರೀಶನೆ ಸರುವ ಲೋಕ ಪೊರೆವನೆ ಪ ಅರಿತು ಅರಿಯದಂತೆ ನಾನು ಗರುವದಿಂದ ಮೆರೆದನಯ್ಯ ಅ.ಪ ಅರುಣ ಉದಯದಲ್ಲಿ ಎದ್ದು ಹರಿಯೆ ನಿನ್ನ ಸ್ಮರಣೆ ಬಿಟ್ಟು ಗೊರಿಕೆ ಹೊಡಿದು ನಿದೆÀ್ರಮಾಡಿ ದುರಿತದಲ್ಲಿ ಪೊರಳುವವನ 1 ಕುತುಬ ಕಾಲದಲ್ಲಿ ಬಂದ ಅತಿಥಿಗಳನು ಜರೆದು ನೂಕಿ ಮಿತಿಯ ಮೀರಿ ಸವಿಯುತ ಪರ- ಗತಿಯ ದಾರಿ ಕಾಣದವನ 2 ದಾನಧರ್ಮ ಕೇಳಬಂದ ಮಾನವಂತ ಜನರ ಬಹಳ ಹೀನ ಮಾತಿನಿಂದ ಬೈದ ಜ್ಞಾನರಹಿತನಾದ ನರನ 3 ರೊಕ್ಕವಿರುವದೆಂದು ಬಹಳ ಸೊಕ್ಕಿನಿಂದ ಬಡವರನ್ನು ಲೆಕ್ಕಿಸದೆ ಮಾತನಾಡಿ ಧಿಕ್ಕರಿಸಿದ ಅಧಮ ನರನ 4 ಪಟ್ಟದರಸಿಯಿರಲು ಅವಳ ಬಿಟ್ಟು ಪರರ ಸತಿಯ ಬಯಸಿ ಅಟ್ಟಹಾಸದಿಂದ ನಗುತ ಕೆಟ್ಟು ಹೋದ ಭ್ರಷ್ಟ ನರನ 5 ಎಷ್ಟು ಮಾಡಲೇನು ಎಳ್ಳಿ ನಷ್ಟು ಸುಖವ ಕಾಣಲಿಲ್ಲ ಇಷ್ಟ ಮಿತ್ರ ನೀನೆಯೆಂದು ಗಟ್ಟಿಯಾಗಿ ತಿಳಿದುಕೊಂಡೆ 6 ಶ್ರಿಷ್ಟಿಗೊಡೆಯನು ರಂಗೇಶ- ವಿಠಲನೆಂಬ ಮತಿಯ ಎನಗೆ ಎಷ್ಟು ಮಾತ್ರ ಕೊಟ್ಟು ಸಲಹೊ ಕೆಟ್ಟ ಮೇಲೆ ಬುದ್ಧಿ ಬಂತು 7
--------------
ರಂಗೇಶವಿಠಲದಾಸರು