ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ವಿದ್ಯಾಮರವೇ ಉದ್ಯೋಗದ ಮರವೇ ಪ ಅಂಜನಾ ದೇವಿಯ ನೀ ಜಠರದಿ ಜನಿಸಿ ಕಂಜರಾಕ್ಷ ಶ್ರೀರಾಮಭದ್ರನ ಭೃತ್ಯನೆನಿಸಿ ಸಂಜೀವಿನಿಯ ತಂದೆ ಅಂಜದಾರ್ಣವ ದಾಂಟಿ ತಂದೆ ರಂಜಿಪ ಮುದ್ರಿಕೆಯ ಅವನಿಜಾತಳಿಗಿತ್ತು ಬಂದೆ1 ಹೆಸರಾದ ಕೌರವ ಬಲವ ಸವುರಿ ನೀ ಉಸುರಿಲ್ಲದವರನು ನೆಗಹಿ ನೀ ಮಿಸುಕದೆ ಅಸುರರ ಅಸುವ ಪೀಡಿಸಿದೆ ಅಸುನಾಥ ಹರಿಸಿ ನೀನತುಳ ತೋಷವನಿತ್ತೆ 2 ಧರೆಯೊಳು ನೀ ವರ ಕಾಪ್ಯಪುರದಿ ಜನಿಸಿ ಹರಿಮತವ ಹರಹಿ ಹರಿಸಿ ರೂಹುಗೊಳಿಸಿ ಹರಿಪರಬ್ರಹ್ಮನೆಂದರಿಯೆ ಜಗಕ್ಕೆ ಕೋರಿ ನರಸಿಂಹವಿಠಲನನುಗಾಲ ತೋರುವನು ದಾರಿ 3
--------------
ನರಸಿಂಹವಿಠಲರು
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
--------------
ಪ್ರಸನ್ನವೆಂಕಟದಾಸರು
ಸಂದು ತೀರದಿರಲಿ ಆನಂದಭಕುತಿ ಕೃಷ್ಣಹೊಂದಿ ಬಿಡಲಾರೆನೊ ಮುಕುಂದ ನಿನ್ನಂಘ್ರಿ ನಿಷ್ಠೆಯ ಪ.ಸಿರಿಭಾಗವತಶಾಸ್ತ್ರವರಪಂಚರಾತ್ರಾಗಮಪರಮಭಾರತದ ತಾತ್ಪರ್ಯಾರ್ಥದಪರಿಚಯವಮಾಡುಹರಿಮಹೋದಾರಿ ಕೃಷ್ಣಗುರುಮಧ್ವ ನಿರೂಪದ ತರತಮ ಭಾವಾರ್ಥದ1ಜಯರಾಯ ಗುರುಗಳ ವಿಜಯವಾಕ್ಯವ ಕೇಳಿಸುನಯತಂತ್ರಸಾರಮಂತ್ರಾಶ್ರಯ ಬಲಿಸುದ್ವಯಸಪ್ತ ಭಕ್ತಿಯಿಂದ ಆಯುಷ್ಯ ಸಾಗಿಸು ತತ್ವಚಯಜ್ಞಾನವೆಂಬ ದಿವ್ಯ ಪೀಯೂಷವುಣಿಸುವ ಸವಿ2ಲಲಿತ ಶ್ರೀಮುದ್ರೆ ಊಧ್ರ್ವತಿಲಕ ತಪ್ತಲಾಂಛನಹೊಳೆವ ದ್ವಾದಶನಾಮ ತುಲಸಿದಂಡೆಕಳಧೌತ ಮೀರ್ವಾಂಗಾರ ನಳಿನಾಕ್ಷ ಧಾತ್ರಿಸರಗಳದೊಳೊಪ್ಪುವ ಶ್ಲಾಘ್ಯ ಬಲುವೈರಾಗ್ಯ ಭಾಗ್ಯದ 3ಅಹರ್ನಿಶಾತ್ಮಜ ಸವಿ ಸ್ನೇಹವೆ ಶ್ರೀಪಾದದಲ್ಲಿದೇಹ ಧನ ಮನ ಒಪ್ಪಿಸಿಹೊ ವೃತ್ತಿಲಿಬಹಿರಂತಕ್ಷಣಕೆ ರೂಹುದೋರ್ವ ಭಾಷ್ಪ ತನುರುಹತೋಷಾಬ್ದಿಯೊಳು ಮಗ್ನರಹ ಮಹಿಮರ ಸಂಗ4ಎಸೆವ ಹರಿದಿನಅನಿಮಿಷಜಾಗರದ ಕೀತ್ರ್ನೆಲಸತ್ತಿರುಳಿನಾಪರವಶನರ್ತನ ಕುಶತಲ್ಪ ಪ್ರಸನ್ವೆಂಕಟೇಶನಂಘ್ರಿಲಂಪಟನಿಯಮೇರ ತಾಳ ಮೇಳಸುಸುಖ ಸುಬ್ಬಾನ ಸೂರೆ 5
--------------
ಪ್ರಸನ್ನವೆಂಕಟದಾಸರು