ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ನಿರ್ಮಲ ಹೃದಯ ಮಂಟಪದೊಳಗೆ ನಿಶ್ಚಲ ಮಣಿಯಿಟ್ಟುಧರ್ಮ ಪಟ್ಟಾವಳಿಯ ಹಸೆ ಹಾಸಿಧರ್ಮ ಪಟ್ಟಾವಳಿಯ ಹಸೆ ಹಾಸಿ ಮುಕ್ತಿಯನುಕರ್ಮ ಹರೆಯರು ಕರೆದರು 1 ಪರಮ ಪುರುಷ ಬಂದು ಪರಿಣಾಮದಿ ಕುಳಿತು ಇಹನುಪರಮ ಪಾವನೆ ಹಸೆಗೇಳುಪರಮ ಪಾವನೆ ಹಸೆಗೆ ಏಳೆಂದು ಮುಕ್ತಿಯನುಪರಮ ಶಾಂತಿಯರು ಕರೆದರು 2 ನಿತ್ಯತೃಪ್ತನು ಬಂದು ನಿಜದಲ್ಲಿ ಕುಳಿತಿಹನುನಿತ್ಯ ಆನಂದೆ ಹಸೆಗೆ ಏಳುನಿತ್ಯ ಆನಂದೆ ಹಸೆಗೆ ಏಳೆಂದು ಮುಕ್ತಿಯನುನಿತ್ಯ ಸತ್ಯೆಯರು ಕರೆದರು 3 ಮಂಗಳ ಮೂರುತಿ ಬಂದು ಮಂಗಳವಾಗಿ ಕುಳಿತಿಹನುಮಂಗಳ ಮುಖಿಯೇ ಹಸೆಗೇಳುಮಂಗಳ ಮುಖಿಯೇ ಹಸೆಗೇಳು ಎಂದು ಮುಕ್ತಿಯನುಮಂಗಳ ಮುಖಿಯರು ಕರೆದರು 4 ರೂಪ ರಹಿತನು ಬಂದು ರೂಪವಾಗಿ ಕುಳಿತಹನುರೂಪ ಮಹಾ ರೂಪೇ ಹಸೆಗೇಳುರೂಪ ಮಹಾ ರೂಪೇ ಹಸೆಗೇಳು ಎಂದು ಮುಕ್ತಿಯನುರೂಪವತಿಯರು ಕರೆದರು 5 ಅಚ್ಯುತನೆ ತಾ ಬಂದು ಅಚ್ಚಾರಿಯಲಿ ಕುಳಿತಿಹನುಅಚ್ಯುತ ರೂಪಳೆ ಹಸೆಗೇಳುಅಚ್ಯುತ ರೂಪಳೆ ಹಸೆಗೇಳೆಂದು ಮುಕ್ತಿಯನುನಿಶ್ಚಿತ ಮತಿಯರು ಕರೆದರು 6 ಸಾಕ್ಷಿರೂಪನೆ ಬಂದು ಸಾಕ್ಷಾತ್ತು ಕುಳಿತಿಹನುಸಾಕ್ಷಿಭೂತಳೆ ನೀನು ಹಸೆಗೇಳು ಸಾಕ್ಷಿಭೂತಳೆ ನೀನು ಹಸೆಗೇಳೆಂದು ಮುಕ್ತಿಯನುಸೂಕ್ಷ್ಮಮತಿಯರು ಕರೆದರು7 ವೇದಾತೀತನೆ ವೇದ್ಯವಾಗಿ ಕುಳಿತಿಹನುವೇದಮಾತೆಯೆ ನೀನು ಹಸೆಗೇಳುವೇದಮಾತೆಯೆ ನೀನು ಹಸೆಗೆ ಏಳೆಂದು ಮುಕ್ತಿಯನುವೇದಸ್ಮøತಿಯರು ಕರೆದರು8 ಜ್ಯೋತಿ ಚಿದಾನಂದನೆ ಬಂದು ಜೋಕೆಯಲಿ ಕುಳಿತಿಹನುಜ್ಯೋತಿ ಪ್ರದೀಪೆಯೇ ಹಸೆಗೇಳುಜ್ಯೋತಿ ಪ್ರದೀಪೆಯೇ ಹಸೆಗೇಳು ಏಳೆಂದು ಮುಕ್ತಿಯನುಜ್ಯೋತಿರ್ಮತಿಯರು ಕರೆದರು 9
--------------
ಚಿದಾನಂದ ಅವಧೂತರು
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು