ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು
ಶ್ರೀನಿವಾಸ ನಿನ್ನ ನಂಬಿದ ದಾಸನ ಎನ್ನನು ಕಾಯೋ ಶ್ರೀವಾಸುಕಿಶಯನ ಪ ರೂಪರಹಿತ ಬಹುರೂಪ ಧರಿಸಿಹ ಶ್ರೀಪತಿ ಎನ್ನನು ನೀಪರಿಪಾಲಿಸು 1 ಕಾಲರೂಪ ಬಹುಲೀಲೆಯ ತೋರುವ ಮೂಲಪುರುಷ ಸುರಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸ ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿ ಕಲ್ಪಿತ ಸುರನರ ಕಲ್ಪಭೋಜ ಹರಿ 4 ಖಂಡಪರಶು ಅಖಂಡಲಾದಿ ಸುರ ಪುಂಡರೀಕ ಪದ 5 ಮಂದರಧರ ಗೋವಿಂದ ಮುಕುಂದ ಸ ನಂದನಾದಿ ಮುನಿಬೃಂದ ಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾಧಾರ ಧೀರವರದವಿಠಲ ಹರಿ 7
--------------
ವೆಂಕಟವರದಾರ್ಯರು