ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ಪಾಲಿಸೋ ಗಂಗಾಧರ ಪಾಲಿಸೋ ಪ. ಪಾಲಿಸೊ ಗಂಗಾಧರನೆ | ಮಧ್ಯ ಫಾಲದಿ ನಯನ ಉಳ್ಳವನೆ | ಆಹ ಶ್ರೀಲೋಲನ ಗುಣಜಾಲವ ಸ್ಮರಿಸುತ್ತ ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ಅ.ಪ. ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು ದುರ್ಮತಿಗಳನೆ ಮೋಹಿಸಿ | ಕು ಧರ್ಮದ ಶಾಸ್ತ್ರವ ರಚಿಸಿ | ಅಂ ಧತಮ್ಮಸಿಗವರ ಕಳಿಸಿ | ಆಹ ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ ನಿತ್ಯ ರಮಿಸುತಲಿಪ್ಪನೆ 1 ಕಂಜನಾಭನ ಮೊಮ್ಮಗನೆ | ಖಳರ ಭಂಜಿಸುವಂಥ ಬಲಯುತನೆ | ಮನ ರಂಜನ ರೂಪಾಕೃತನೆ | ಖಳ ಗಂಜಿ ಹರಿಯಿಂದ ರಕ್ಷಿತನೆ | ಆಹ ಅಮೃತ ಮಥಿಸುವಾಗ ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ 2 ಕಪಿಲನದಿ ತೀರದಲ್ಲಿ | ಬಹು ತಪಸಿಗಳಿಗೆ ಒಲಿಯುತಲಿ | ಭಕ್ತ ರಪರಿಮಿತ ಬರುತಿಲ್ಲಿ | ನಿತ್ಯ ಜಪಿಸುತ್ತ ನಿನ್ನ ಸ್ತೋತ್ರದಲಿ | ಆಹ ಗುಪಿತದಿಂದ್ಹರಿ ಭಕ್ತರಪವರ್ಗದೊಡೆಯ ನಿನ್ನ ಲ್ಲಿಪ್ಪನೆಂತೆಂದು ಜಪಿಸುತ್ತಲಿಪ್ಪರೊ3 ಗಂಗಾಧರನೆನಿಸಿದನೆ | ಅಂತ ರಂಗದಿ ಹರಿಯ ತೋರುವನೆ | ಉಮೆ ಕಂಗಳಿಗಾನಂದಪ್ರದನೆ | ನಿತ್ಯ ರಂಗನಾಥನ ಪೂಜಿಸುವನೆ | ಆಹ ಜಂಗಮ ಜೀವರ ಮನದಭಿಮಾನಿಯೆ ಲಿಂಗರೂಪದಿ ಜನರ ಕಂಗಳರಂಜನೆ4 ಅಪಾರ ಮಹಿಮನ ಗುಣವ | ಬಹು ರೂಪಗಳನೆ ನೋಡುತಿರುವ | ನಿತ್ಯ ಶ್ರೀಪತಿ ನರಹರಿಯ ನೆನೆವ | ಮುಂದಿ ನಾ ಪದವಿಗೆ ಶೇಷನಾಗ್ವ | ಆಹ ಪರಿ ಪರಿ ಗೋಪಾಲಕೃಷ್ಣವಿಠ್ಠಲನ ಧ್ಯಾನವ ನೀಡೊ5
--------------
ಅಂಬಾಬಾಯಿ
ಶ್ರೀ ಬದರಿ ಬದರೀಯಾ | ಯಾತ್ರೆಯಾ ಮಾಡಿ | ಬದರೀಯಾ ಪ ಬದರಿಯ ಯಾತ್ರೆಯ ಮಾಡಿ | ನಿಮ್ಮಮುದ ಶಾಶ್ವತವನ್ನೆ ಬೇಡಿ | ಆಹಸದಮಲ ದೇಹದಾಲಯವೆ | ಸದಾಶ್ರಿತ್ಹಿಮಾಲಯಹೃದಯ ಮಧ್ಯದಲೀಹ | ಬದರೀನಾಥನ ನೋಡೀ ಅ.ಪ. ಶ್ವೇತ | ದ್ವೀಪಾದ್ಯಾಲಯಗಳಸುಪದ ತೀರ್ಥವು ಸ | ರಿತ್ಪ್ರವರಾದಿ ಚಿಂತಿಸಿ 1 ತನುಮನ ಧನಗಳಾಶೆಯ | ತೊರೆದುಮನ ಆದಿಕರಣಗಳ್ಹರಿಯ | ಪಾದವನಜದಲ್ಲಿಡೆ ಅದು ಅಭಯ | ಸುದತಿಮಣಿ ಸಹ ಪೋಗೋದೆ ಹೃದಯ | ಆಹವನ ಭುವನ ಚರಿಸಿ ಸತ್ಪಾ | ವನ ಕ್ಷೇತ್ರಗಳಮಣಿದು ಸರ್ವತೀರ್ಥ | ಸ್ನಾನಾದಿ ಗೈಯುತ 2 ಸಿಂಧು ಮಾಧವ ಸಿರಿ ಕೃಷ್ಣನ ನೆನೆದು 3 ಶೌರಿ ಪಾಂಡುರಂಗರಾರಾಧನೆಯ ಗೈದು | ತೋರುತ ಮುದವನು 4 ಶಾರದ ನಾಡೀಲಿ ಗಂಡಕೀ ಮತ್ತೆಚಾರು ಲಂಬುಶಿಖಿ ಗೋಮತಿ | ಆ ಗಾಂ-ಧಾರಿಯೊಳಗೆ ಮಾರುಧೃತಿ | ನೆನೆಚಾರು ಶಂಕಿನಿ ನಾಡಿ ತಪತೀ | ಆಹವೀರ ರಾಮಾ ಮಧು | ವೈರಿಯು ಶ್ರೀರಂಗನಾರಾಯಣನ ರೂಪ | ಸಾರುತ ತಪತೀಲಿ 5 ಸಿರಿ ಮಾಧವನ ನೆನೆಯೆಪರಿಹರಿಸುತ ಪಾಪ ಸರುವಾಭೀಷ್ಟವ ನೀವ 6 ಸ್ತವರನದಲೀಪರಿ ಮಿಂದು | ದೇಹಪವಿತರವಾಯಿತು ಎಂದು | ಕ್ಷೇತ್ರಸರ್ವವ ಸ್ತುತಿಸುತ ಮುಂದೆ | ಪೋಗೆಭವರಹಿತ ಹರಿದ್ವಾರ ಅಂದು | ಆಹಭುವನ ಪಾವನ ಗಂಗಾ | ಪ್ರವಹಮೀಯುತ ಮತ್ತೆಭವಹರ ಹರಿನಾಮ | ಶ್ರವಣ ಮನನಗೈದೂ 7 ಸೂರ್ಯ ಪ್ರಭೆ ನೇತ್ರಎಸೆವೊ ಲಲಾಟದಿ | ಹೃದಯ ದೋಳ್ವಿಕಾಲ 8 ಹೇಮ ಧಾಮ | ಕಂಡುನೀಗೊ ನೀ ದೇಹದ ಶ್ರಮ | ಓಡಿಪಂಚ ರೂಪಗಳನೆ ತಂದು | ಆಹಪಂಚ ನಾಡಿಯ ಮಧ್ಯ | ಮಿಂಚಿಪ ಗೃಹದಿ ವಿ-ರಂಚಿ ಪಿತನ ನೋಡಿ | ಸಂಚಿತಾದಿಯ ಕಳೆ 9 ಕಮಲ ಮಧ್ಯ | ಮುದದಲರ್ಚಿಸುತಲಿ 10
--------------
ಗುರುಗೋವಿಂದವಿಠಲರು