ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು 1 ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು ಕಾಲಚಕ್ರನಿಗಂಜಿ ಮಲ ಒಸರುತಿರುವಾಗ ನೀಲಶ್ಯಾಮನ ನಾಮ ನಾಲಗ್ಗೆ ಬರದು 2 ಎಂಟೆರಡು ವಾಯುಗಳ ಕಂಠನಾಳಕೆ ಸೇರಿ ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ ಕುಂಠ ನಾಮವು ತಂಟೆಗೆ ಬರದು 3 ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ ಕಾಯ ನಾಡಿಗಳು ಕುಂದಿ ನೋಡಿ ಸತಿಸುತರಂ ಮಾತಾಡೇನೆಂದೆನಲಾಗ ರೂಢಿಗೀಶನ ಧ್ಯಾನ ಕೂಡಿ ಬರದಯ್ಯ 4 ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ ಕಾಲನಾಳಿನ ಮಹ ಧಾಳಿಯನು ಗೆಲಿಯೊ ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ 5
--------------
ರಾಮದಾಸರು
ಹರಿದಾಸಮಹತಿ ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಪ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಅ ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ1 ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ 2 ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ 3
--------------
ಕನಕದಾಸ