ಇಂದಿರೆಯರಸನ ಛಂದದಿಂದ ಭಜಿಸೋ | ಮನದಲಿ ನೀ ನಿಲಿಸೊ ಪ ಕುಂದನು ಎಣಿಸದೆ ಬಂದು ಕಾಯ್ವ ನಿನ್ನಾ |ನೆಂದು ಕಂದ ಬಲು ಘನ್ನಾ ಅ.ಪ. ಪಾದದ ಮೂಲವು | ಪಾತಾಲವು ಎಂದೂ | ಉಪರಿ ರಸಾತಲವೆಂದುಪಾದದ ಪರ್ವವು | ಮಹಾ ತಲಾಖ್ಯ ಲೋಕ | ಉಪರಿ ತಲಾತಲ ಲೋಕ ||ಸಾಧಿಸು ಜಂಘೆಗಳ್ | ದ್ವಯವೆ ಸುತಲ ಲೋಕ |ಚಿಂತಿಸಿ ಕಳೆ ಶೋಕ ||ಮೋದದ ಊರು ದ್ವಯ | ವಿತಲಾತಲವೆನ್ನೂ | ಮುಂದೆ ಸಾಗುತಲಿನ್ನು 1 ಭೂರಿ ಲಲಾಟವೆ | ತಪಸಿಗಳಾಸ್ಥಾನಾ | ಶಿರ ಬ್ರಹ್ಮನ ಸ್ಥಾನ 2 ಮುನ್ನ ಸೂಕ್ಷ್ಮ ಚಿಂ | ತನೆಯೇ ಬಲು ಕಷ್ಟ | ಎಂದೆನುತ ವಿಶಿಷ್ಟಘನ್ನ ಮಹಿಮ ಹರಿ | ತಾಳಿದ ಬೃಹದ್ರೂಪ | ಅದುವೆ ವಿರಾಟ್ರೂಪಾ ||ನಿನ್ನ ಬಿಂಬ ಗುರು | ಗೋವಿಂದ ವಿಠಲನ್ನ | ಮತ್ತೆ ಸ್ಥೂಲವನ್ನಾ ನನ್ನೆಯೆಂದೈಕ್ಯವೆ | ಚಿಂತಿಸೋದು ಮುನ್ನ | ಒಲಿವನು ಗುಣ ಪೂರ್ಣ 3
ಇದು ಏನು ಚರಿಯಾ ವೆಂಕಟರಾಯ ಇದು ಏನು ಚರಿಯಾ ಪ ಇದು ಏನು ಚರಿಯಾ ಶ್ರೀಯದುಕುಲ ತಿಲಕನೆ ಸದನತ್ರಯವ ಬಿಟ್ಟು ಹುದುಗಿಕೊಂಡಿರುವುದು ಅ.ಪ ಕನಕಪರ್ವತದಲ್ಲಿ ದಿನದಿನ ಮಾಡುವ ಘನ ಪೂಜೆಯನೆ ನೀನೆನಿಸದಿರುವುದು 1 ಪೊಂಬಣ್ಣಾಂಬರವುಟ್ಟು ಹೊಂಬಣ್ಣಾಂಬರವಿಟ್ಟು ಕಂಬೆಣ್ಣೆಯನೆ ಬಿಟ್ಟು ದಿಗಂಬರನಾಗಿದ್ದು 2 ಬುತ್ತಿ ಮೊದಲಾದ ಉತ್ತಮನೈವೇದ್ಯ ಹೊತ್ತಿಗುಂಬೋದು ಬಿಟ್ಟು ತುತ್ತುಗಾಣದಿರುವೋದು 3 ಭಾಗ್ಯವಂತನು ನೀನು ಭಾಗ್ಯರೂಪಳು ರಾಣಿ ಭಾಗ್ಯತನವ ಬಿಟ್ಟು ನಿರ್ಭಾಗ್ಯನಾಗಿರುವೋದು 4 ದಾತಗುರುಜಗನ್ನಾಥ ವಿಠಲ ಜಗದಿ ನಾಥನಾಗದೆ ಅನಾಥನಾಗಿರುವೋದು 5