ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ 1 ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ ಸೋಸಿನಿಂದಲಿ ಕರಡಿ ಮಗಳನು ಯೋಚಿಸದೆ ಕೈಪಿಡಿದು ಸೌಳ- ಸಾಸಿರದ ಸತಿಯರನು ಕೂಡಿದ ವಾಸುದೇವನ ಮೋಸವರಿಯದೆ 2 ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ ದಾಸಿಯ ಕೊಂದ ಉದಾಸೀನದಿಂದ ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು ರಾಸಕ್ರೀಡೆಯ ವನಿತೆಯರ ಮನ ದಾಸೆ ಪೂರೈಸಿ ರಾತ್ರಿ ವೇಳದಿ ವಾಸುದೇವನು ಓರ್ವ ಸತಿಯೊಳು ಕ್ಲೇಶಪಡಿಸದೆ ಮೋಸವರಿಯದೆ3 ಅಖಿಳ ಮಹಿಮನೆನೆ ಊಳಿಗ ಮಾಡಬಹುದೆ ಚಂಡನಾಡುವ ನೆವದಿಂದ ಕಾಳಿಂಗನ ಮಂಡೆಯ ತುಳಿದು ನಾಟ್ಯವನಾಡಬಹುದೆ ಗಂಡುಗಲಿ ಅರ್ಜುನನು ರಥಕೆ ಬಂಡಿಬೋವನ ಮಾಡಬಹುದೆ ಪುಂಡಲೀಕನು ಇಟ್ಟೆಗೆಯ ಮೇ- ಲ್ಪಾಂಡುರಂಗ ನಿಲಿಸಬಹುದೆ4 ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ ರಮೆಯರಸಗೆ ಬಹಳ್ಹಸಿವೆನುತಿರಲು ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ ಕಮಲನೇತ್ರಗೆ ವಿವಿಧ ಭಕ್ಷಗ- ಘೃತ ಪರಮಾನ್ನಗಳನು ಕಮಲನಾಭ ವಿಠ್ಠಲಗೆ ಅರ್ಪಿಸಿ ಶ್ರಮವ ಕಳೆದೈದಿದರು ಮುಕ್ತಿಯ 5 ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ
--------------
ನಿಡಗುರುಕಿ ಜೀವೂಬಾಯಿ