ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ಪ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ1 ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಋಷಿಕುಲೋತ್ತಮರಾದ ಗುರುಗಳ2 ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ3 ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ 4 ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನÀ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ 5
--------------
ವಿಜಯದಾಸ
ದರುಶನವಾಯಿತು ಪಂಢರೀಶನ ಪ ದರುಶನದಿಂದಲಿ ಧನ್ಯರಾದೆವು ಸರಸಿಜಭವನ ನಾಭಿಯಲಿ ಪಡೆದವನ ಅ.ಪ ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ- ನಂದಪದವಿಯನಿತ್ತ ನಂದನ ಕಂದನ 1 ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ 2 ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ ನೆರವೇರಿಸುವ ಜಗದ್ಭರಿತನ ಶ್ರೀಪಾದ 3 ನಾಗಶಯನ ನಿಖಿಲಾಗಮವೇದ್ಯನ 4 ಮುಕುತಿದಾಯಕ ಗುರುರಾಮವಿಠಲ ಚರಣ5
--------------
ಗುರುರಾಮವಿಠಲ
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು