ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ತಾರೊ ನಿನ್ನಯ ಕರವಾರಿಜವನು ಕೃಷ್ಣ ಸಾರಿ ಬೇಡಿಕೊಂಬೆ ಮುರಾರಿ ದಯಮಾಡಿಪ ಮಾರಮಣನೆ ಸಂಸಾರ ಶರಧಿಯೊಳೀಸ ಲಾರದೆ ಬಳಲುತ ಚೀರೂತಲಿರುವೆ ಅ.ಪ ದಾರಾ ಪುತ್ರರೆನಗೆ ದಾರಿ ತೋರುವರೆಂದು ಮಾರ ಜನಕನೆ ಕೇಳೊ ಮೋರೆ ತೋರದೆ ಅವರು ಜಾರಿಕೊಂಡರಯ್ಯ ಭೂರಿ ಬಳಗದವರ್ಯಾರು ಬಾರರೊ ದೇವ 1 ಧಾರುಣಿ ಧನ ಧಾನ್ಯ ಹೇರಳವಾಗಿದೆ ಜೀವ ಹಾರಿ ಹೋಗುವಾಗ ಯಾರಿಲ್ಲವಯ್ಯ ಕೋರಿ ಭಜಿಪೆ ನಿನ್ನ ಬಾರಿ ಬಾರಿಗೆ ನಾನು ಕ್ಷೀರ ವಾರಿಧಿವಾಸ ವೀರ ಮಾರುತೀಶ 2 ಘೋರಾಂಧಕಾರದಿ ಮೇರೆಯು ಕಾಣದೆ ಮಿತಿ ಮೀರಿದ ಭಯದಿಂದ ಗಾರು ಪಡುತಿಹೆನೊ ಕಾರುಣ್ಯನಿಧಿಯೆ ನೀ ಪಾರು ಮಾಡದಿರೆ ಮತ್ತ್ಯಾರು ಕೇಳುವರೆನ್ನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಯಾರಿಗೆ ದೂರುವೆನು ಗಿರಿಯ ರಾಯ ಯಾರೆನ್ನ ಸಲಹುವರು ಪ ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು ದುಷ್ಟರಿಂದಲೆ ನೊಂದೆನು ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ 1 ಹಿಂದೆ ಮಾಡಿದ ಕರ್ಮವು ಈ ಭವದೊಳು ಮುಂದಾಗಿ ತೋರುತಿದೆ ಇಂದಿಲ್ಲ ಗತಿಯದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ 2 ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ ಹಗೆಯೊಳು ನಗಿಸುತಿದೆ ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ 3 ಬಾಡಿದ ಅರಳಿಯನು ಕಲ್ಲೀನ ಮೇಲೆ ಈಡಾಗಿ ನಟ್ಟಿದರೆ ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ 4 ಹಲವು ಪರಿಯ ಕಷ್ಟವ ನಿನ್ನಯ ಪದ ಜಲಜದ ಕರುಣದಲಿ ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗೆನ್ನೊಳು (ವರಾಹತಿಮ್ಮಪ್ಪ)15
--------------
ವರಹತಿಮ್ಮಪ್ಪ
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು