ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಿನಪಾದ ಅಂಬುಜಾಕ್ಷನ ಪ್ರಿಯಬೆಂಬಿಡದಲೆ ಯೆನ್ನ | ಕಾಯೋ |ಬೆಂಬಿಡದಲೆ ಯನ್ನ ಕಾಯೆಂದು ನಿನ್ನನುಹಂಬಲಿಸೂವೆ ಮೋಹನ್ನರಾಯಾ ಪ ದೋಷರಾಶಿಯನೀಗಿ | ದಾಸನ್ನ ಮಾಡಿದಋಷ್ಯಂಶರಾಗಿಹ ನಿಮ್ಮಾ |ಋಷ್ಯಂಶರು ವಿಜಯ ದಾಸರ ಪ್ರೇಮಕ್ಕೆಆಶ್ರಯನಾಗಿಪ್ಪ ಮೋಹನ್ನ 1 ಹೆಮ್ಮೆಯ ಪಡುವೆ ನಾ ನಿಮ್ಮವರವನೆಂದುದುರ್ಮಮತೆಯ ನೀಗೋ ಎನ್ನಾ |ದುರ್ಮಮತೆಯು ನೀಗಿ | ಭರ್ಮಗರ್ಭನ ಪಿತನಪೇರ್ಮೆ ದೊರಕಿಸೊ ಎನಗೆ ಮುನ್ನಾ 2 ಅಂಬುಜಾಂಬನಂಘ್ರಿ | ಅಂಬುಜ ತೋರೆಂದುಹಂಬಲಿಸಿ ಬೇಡುವೆ ನಿನಗೆ |ಹಂಬಲಿಸಿ ಬೇಡುವೆ | ಶಂಬರಾರಿಯ ತೇಜನಂಬಿ ಬಂದಿಹೆ ನಿನ್ನ ಅಡಿಗೇ 3 ವಿಷಯಧುಯ್ಯಲಿನಿಂದ | ಕ್ಲೇಶವಧಿಕವಯ್ಯ ವಿಷದಂತೆ ಕಾಣಿಸೊ ಜೀಯ |ವಿಷದಂತೆ ಕಾಣಿಸಿ | ಶೇಷವಿಲ್ಲಾಧಾಂಗೆ |ದೋಷವಳಿಸಿ ಕಾಯೊ ಜೀಯಾ 4 ನಿನ್ನ ವಂಶಜನಾಗಿ | ನಿನ್ನವರವನಾಗಿಉನ್ನಂತ ಮಹಿಮ ಶ್ರೀಹರಿಯಾ |ಉನ್ನಂತ ಮಹಿಮನು | ಅನ್ನಂತನ ಪಾದಕಾಣದಿದ್ದವನಿರೆ ವ್ಯರ್ಥ 5 ಪಂಚಾಶದ್ವತ್ಸರ | ಹಂಚಿಪೋಗುವ ಮುನ್ನಪಂಚರೂಪಾತ್ಮಕ ಹರಿಯಾ |ಪಂಚರೂಪಾತ್ಮ ವಿ | ರಿಂಚಿಪಿತನ ಪಾದಹಂಚಿಕಿಂದಲಿ ತೋರೊ ಮೋಹನ್ನ 6 ಉರುಗಾದ್ರಿವಾಸ ವಿಠಲಾತ್ಮಕನು ಶಿರಿಗುರುಗೋವಿಂದ ವಿಠ್ಠಲನ |ಗುರಗೋವಿಂದ ವಿಠಲನ ಚರಣಾರವಿಂದವತೋರಿ ಪೊರೆ ನಮ್ಮ ಹಿರಿಯಾ 7
--------------
ಗುರುಗೋವಿಂದವಿಠಲರು
ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ ಮಿಂಚಿನಂತೆ ತೋರಿಪೋದ 1 ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ 2 ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ 3 ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ 4 ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ 5 ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ 6 ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ 7 ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ ಬುದ್ಧ ಕಲ್ಕಿ 8 ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ 9
--------------
ಶಾಮಶರ್ಮರು
ಶ್ರೀ ವಾಯುದೇವರು ಕಾಯೊ ಹನುಮರಾಯ ನಿನ್ನ ಕಾಯ ಮನದಿ ನಮೋ ಪ ಭಾರತೀಶ ಕೃಪಾಸಮುದ್ರನೆ ವಾರಿಜಜಾಂಡದಿ ಸರ್ವಜೀವರೊಳಿದ್ದು ಮೂರೇಳು ಸಾಸಿರ ನೂರಾರು ಜಪಗಳ ಇರುಳು ಹಗಲು ನರಹರಿಗೆ ಅರ್ಪಿಪ ಸುರ 1 ಮಾತರಿಶ್ವಪ್ರಖ್ಯಾತ ಮಹಿಮನೆ ವಾತ ಪ್ರಭಂಜನ ಸತತ ಎನ್ನನು ಅತಿ ಹಿತದಿ ನೀ ಸಲಹುವೆ ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ 2 ಸತ್ಪಾತ್ರ ಮಾಡೆನ್ನ ಸೂತ್ರಸುಖ ಸಿತಗಾತ್ರ ಪವಿತ್ರನೆ ಮಾತ್ರಾಕರಣನಿಯಂತೃ ಮಹಂತನೆ ಚಿತ್ರ ಪುರುಷ ಮಾಕಳತ್ರನ ತೋರಿಸೊ 3 ದೇವಜನನುತ ಭಾವಿ ಬ್ರಹ್ಮನೆ ಕಾವ ಕರುಣಿಯೆ ಪವಮಾನ ನಮೋ ನಮೋ ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ ದೇವವರೇಣ್ಯನನಿರುದ್ಧನ ತೋರಿಸೊ 4 ಶುದ್ಧ P್ಪರುಣಾಬ್ಧಿ ನಮೋ ನಮೋ ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ 5 ಜ್ಞಾನಬಲರೂಪ ಹನುಮ ನಮೋ ನಮೋ ಜ್ಞಾನಸುಖಮಯ ಜಾನಕೀಶನ ದೂತ ಇನನ ಸುತನಿಗೆ ವಿಭೀಷಣನಿಗೆ ರಾಮ ತಾನೂ ಒಲಿದ ನೀನೊಲಿದ ಕಾರಣದಿ 6 ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ ಅಂತಕ ಸುಜನರ ಸಂತತ ಪೊರೆವ ಧನಂಜಯಗೊಲಿದನೆ 7 ಪಂಚಭೇದ ಪ್ರಪಂಚ ಸತ್ಯವಿ ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ ರಂತರ ನಿಜಸುಖವೀವನೆಂದೆಯೊ ಮಧ್ವ 8 ಶ್ರೀಶ ಚಿನ್ಮಯ ದೋಷದೂರನು ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ ಭಾಸಿಪ ನಿನ್ನಯ ಹೃತ್ಸರಸಿಜದಲಿ ದಾಶರಥಿಯ ಮುಖ್ಯ ದಾಸವರ್ಯನೆ ನಮೋ 9
--------------
ಪ್ರಸನ್ನ ಶ್ರೀನಿವಾಸದಾಸರು