ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ ರಕ್ಷಿಸೀಕ್ಷಣ ಲಕ್ಷ್ಮೀರಮಣ ಈಕ್ಷಿಸೀಗಲೆ ರಕ್ಷಿಸೆಮ್ಮನು ಕುಕ್ಷಿಯೊಳು ಜಗ ರಕ್ಷಿಸುವ ಹರಿ ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ ಇಂದಿರೆರಮಣ ಗಜೇಂದ್ರವರದ ಹರಿ ಮಂದಹಾಸದಿ ಭಕ್ತವೃಂದವ ಪಾಲಿಪ ನಂದಕಂದನೆ ಬಂದು ರಕ್ಷಿಸು ಇಂದಿರಾ ಭೂದೇವಿ ರಮಣನೆ ಸುಂದರಾಂಗನೆ ಸುಮನ ಸರ ಹೃ- ನ್ಮಂದಿರದಿ ಶೋಭಿಸುವ ದೇವ 1 ನಂದನಕಂದ ಮುಕುಂದ ಹರೇ ಕೃಷ್ಣ ಕಂದರ್ಪ ಜನಕನೆ ಕರುಣಾನಿಧೆ ಹರಿ ಮದನ ಜನಕÀ ಸುಂದರಾಂಗ ಶ್ರೀಸುಮನಸರ ಪ್ರಿಯ ಬಂಧಮೋಚಕ ಭವವಿದೂರನೆ ಸಿಂಧುಶಯನ ಸರ್ವೇಶ ಶ್ರೀಹರಿ 2 ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ- ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3
--------------
ನಿಡಗುರುಕಿ ಜೀವೂಬಾಯಿ