ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ
ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ಪ ಗಂಗಾಜನಕ ಉತ್ತುಂಗ ಮಹಿಮನೆ ಸಂಗರಹಿತನೆ ಭಂಗಹರಿಪನೆ ಅ.ಪ ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ ವಾಸುದೇವ ಅನಂತಮಹಿಮ ಶ್ರೀಶನೆನ್ನುತ ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1 ಸಾಧುಜನ ಹೃದಯವಾಸನೆನ್ನುತ ಪೇಳ್ವರೊ ಸಾಧನ ಜೀವರಿಗೆ ಪರಮಪ್ರಿಯನೆಂಬರೊ ಮೋದತೀರ್ಥ ಸುಧಾರಸ ಸೇವಿಸಿರೆಂಬರೋ ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2 ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ ನಿತ್ಯ ನಿತ್ಯದಲಿ 3 ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4 ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು ಬಿಡದಲೇ ಬಹಮನದ ತಾಪವೆಲ್ಲ ನೀಗಿಸುಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5
--------------
ನಿಡಗುರುಕಿ ಜೀವೂಬಾಯಿ
ಕಷ್ಟದಿ ಕಾಲವ ಕಳೆವೆನು ದೇವಾ |ಪಕ್ಷಿವಾಹನ ಕಾಯೋ ಕರುಣ ಸಂಜೀವಾ ಪಕೃಷ್ಣಮೂರುತಿ ಫಲುಗುಣನಿಗೆಭಾವ|ಸೃಷ್ಟಿಗೊಡೆಯ ಭಕ್ತಜನರನು ಪೊರೆವಾ ||ಉಟ್ಟ ಸೀರೆಯನು ಕುರು ದುಷ್ಟನು ಸೆಳೆಯಲು |ರಕ್ಷಿಸೆನ್ನುತ ಮೊರೆಯಿಟ್ಟ ದ್ರೌಪದಿಗೆ ||ಅಕ್ಷಯವರವಿತ್ತು ಪಕ್ಷಿವಾಹನ ಕಾಯ್ದೆ |ಸೃಷ್ಟಿಗೊಡೆಯ ಶ್ರೀಕೃಷ್ಣಾವತಾರ 1ದಾನವಾಂತಕ ಭಕ್ತ ದೀನದಯಾಕರ |ಮಾನವಶರೀರ ಮನುಮಥನಯ್ಯ ||ಭಾನುನಂದನಫಣಿಬಾಣವನೆಸೆಯಲು |ಜಾಣತನದಿ ನರನ ಪ್ರಾಣವನುಳುಹಿದೆ 2ನಂದಗೋಪನ ಮುದ್ದು ಕಂದನ ಚರಣಕ್ಕೆ |ವಂದಿಸಿ ಕರಗಳಾನಂದದಿ ಮುಗಿವೆ ||ಇಂದಿರೆಯರಸ ಗೋವಿಂದ ಜನಾರ್ದನ |ಮಂದರಧರ ಅರವಿಂದ ನಯನ ದೇವಾ3
--------------
ಗೋವಿಂದದಾಸ