ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ ಶೀರಿ ದಾನವ ಮಾಡಿದೀ ಕೃಷ್ಣಾ ಘೋರ ದೂರ್ವಾಸ ಮುನಿಯು ನಡುವಿರುಳೆ ಹಾರೈಸಿ ಬರೆಯನ್ನವಾ ದೇವಾ ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ ಆ ರಾತ್ರಿ ಕಾಯ್ದ್ಯೋಬಲೆಯಾ 1 ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು ಭರದಿನೆಗಳಿಯು ಪಿಡಿಯಲು ಕಾಲನು ಇರದೆ ನಿನ್ನನು ಸ್ಮರಿಸಲು ದೇವಾ ಗರುಡವಾಹನನಾಗಿ ನೀನೈತಂದು ಕರುಣಿಸಿದ್ಯೋ ಕೊನೆಯ ಗತಿಯ 2 ದುರುಳ ಹಿರಣ್ಯಕನ ಶೀಳಿ ನರಹರಿಯೆ ತರಳ ಪ್ರಲ್ಹಾದನ ಪೊರೆದ್ಯೋ ದೇವಾ ಮರೆಯದಜಮಿಳ ನೆನೆಯಲು ಕೇಳ್ದು ನೀ ಪರಿಹರಿಸಿದೆ ಯಮಬಾಧೆಯ ದೇವಾ ನರಸಿಂಹವಿಠಲ ಸ್ವಾಮಿ ಧ್ರುವನನ್ನು ಪೊರೆದಂತೆ ರಕ್ಷಿಸೆನ್ನಾ 3
--------------
ನರಸಿಂಹವಿಠಲರು
ದೇವಾ ಪಾಲಿಸೋ ಎನ್ನಾ ನಿಜ ಭಾವದಿ ರಕ್ಷಿಸೆನ್ನಾ ಕಾವುದೆನ್ನನು ನೀನೂ ಪ ಗಜರಾಜ ಪಶುವಾ ಹಿಂದೆ ಭಜಿಪಾಗತಾ ನೀನೇ ಕಾಯ್ದೆ ನಿಜದಾಪದವ ತೋರಿದೇ 1 ಮಂದವಾಗಿಹೇ ನಾನು ನಿಜಾನಂದದೊಳ್ ಇಡೋ ನೀನು ಛಂದದೀ ಸಲಹೊ ನೀನು 2 ಚಿಂತೆಗಳೆಲ್ಲ ತೊರಿಸೊ ನಿಶ್ಚಿಂತ ಪದದೊಳ್ ಪಾಲಿಸೊ ಶಾಂತಿ ಪದದೊಳ್ ಇರಿಸೊ 3
--------------
ಶಾಂತಿಬಾಯಿ
ಮಾಧವಾ ರಕ್ಷಿಸೆನ್ನಾ ಮೋಹನಾ|ನಿನ್ನಾ| ನಂದನಂದನಾ ಪ ತನ್ನ ತಾನುದ್ಧರಿಸಿ ಕೊಳ್ಳಲರಿಯದೆ | ಸಲೆ | ಮುನ್ನಿನಾ ದುರ್ಗುಣವನು ಜರಿಯದೆ ರಂಗಾ | ನಿನ್ನ ನಿಜ ಭಕ್ತಿಯೊಳು ಬೆರಿಯದೇ ವ್ಯರ್ಥ | ಮಾನ್ನ ನಾದೆನು ನಾಮಾಮೃತವ ಸುರಿಯದೇ | ಭವ ತೊರಿಯದೇ 1 ಮಾಯಾ ಮೋಹ ಪಾಶಕ ಅನುಗೊಡುತಾ | ವಿ | ಷಯ ದಾಶೆಗೆ ಬಿದ್ದು ಬಾಯಿ ಬಿಡುತಾ | ಎನ್ನ | ಕಾಯದ ಸುಖಸಾಧನ ನೋಡು | ವ್ಯರ್ಥ | ದು:ಖ ಪಡುತಾ 2 ಸುಖವಾದರೆ ಮನದೊಳುಬ್ಬುಗೊಂಬೆನಾ | ಬಲು | ದು:ಖವಾದರೆ ಹರಿ ಮಾಡಿದ ಎಂಬೆನಾ | ನೆರೆ | ಇಂದು | ಬಲಗೊಂಬೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು