ಮಾನವರೊಳು ಮಾನ ಹೀನನಾದೆನಗೆ ಸುಜ್ಞಾನವ
ಕರುಣಿಸಿ ಸಲಹೋ ದಯಾಳೋ ಪ
ಶರಧಿ ಗಂಭೀರ ಉ -
ಧಾರ ವೈಯ್ಯಾರ ನೀಧೀರ 1
ಮೂಷಕ ವಾಹನನೆ ಕರದಿ ಪಾಶಾಂಕುಶ ವಿಡಿದಿಹನೆ
ದೇಶಿಕರನು ನೆರೆ ಪೋಷಿಸಿ ದುರಿತ
ರಾಶಿಯ ನಾಶಿಸುವ ಗುಣ ನಿಧಿಯೇ 2
ಕಿನ್ನರ ಸೇವಿತ
ನಾಗ ವೈರಿಯ ಸುತ ನಾಗಶಯನ ನುತ
ನೀನೆ ರಕ್ಷಿಸುಎನ್ನ 3
ಇಕ್ಷು ಪಣ್ ಫಲಗಳನು ನಾನಾ
ಭಕ್ಷ್ಯ ಭೋಜ್ಯಂಗಳನು ಭಕ್ಷಿಸಿ ಕುಜನರ
ಶಿಕ್ಷಿಸಿ ಸುಜನರ ರಕ್ಷಿಪೆ ನಿರುತ ನೀ
ದಕ್ಷ ಮುಖಾರಿ ಸುತನೆ 4
ಹಿಂಡು ದಿವಿಜರೊಡನೆ ಪೂಜಿಸಿ ಕೊಂಡು ಹಿಗ್ಗುತಲಿಹನೆ
ದ್ದಂಡ ವಿಘ್ನವ ಪರಿಖಂಡನೆಗೈದು 5