ನಾನಾಗಿ ನನಗಾಗಿ ನಮಿಸುವೆನು ಬಾಗಿ
ನೀನಾಗಿ ಕೃಪೆಮಾಡೋ ದೀನಾನುರಾಗಿ ಪ
ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ
ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ
ತರಳನ ಕರೆತಂದೆ ತರುಣಿಕೂಗಿ
[ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ]
ಹರಿಯೊಂದು ಜಲದಲಿ ನರಳಿದಕರೆಗೆ
ಕರುಣದೊಳೋಡಿ ಬಂದು ಪೊರೆದೆ ನೀತಂದೆ 1
ಜ್ಞಾನಿಯು ನಾನಲ್ಲ ಮಾನಿಯುಮಲ್ಲ
ಧ್ಯಾನದ ರೀತಿಯ ನಾನರಿತಿಲ್ಲ
ನಾನಾ ಶಾಸ್ತ್ರಂಗಳ ಕಲಿತವನಲ್ಲ
ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2