ತಡಿಯೆಲೆ ಮನವೆ ನೀ ಬಡಬಡಿಸುವುದ್ಯಾಕೋ
ಕೆಡಕುಯೋಚನೆಬಿಟ್ಟು ಕಡುಶಾಂತನಾಗೊ ಪ
ಜಡಮತಿತನನೀಗಿ ಬಿಡದೆ ದೃಢದಿ ಜಗ
ದೊಡೆಯನಡಿಯ ಭಜಿಸು ಕೊಡುವನು ನಿಜಸುಖ ಅ.ಪ
ವಂಚಕನಾಗದೆ ವಾಂಛಲ್ಯಳಿದು ಮನ
ಕಿಂಚಿತ್ತಗಲದೆ ನಿರ್ವಂಚಕ ಚಿತ್ತನಾಗೊ
ವಂಚನಿಲ್ಲದೆ ಹರವಿರಂಚಿಗಳ್ನೂತನ ಪ್ರ
ಪಂಚದೊಳಗೆ ನಿನ್ನನಚಲ ಸುಖದಿ ಕಾಯ್ವ 1
ನಿಷ್ಠುರನುಡಿ ಬಿಡು ದುಷ್ಟತ್ವ ದೂರಮಾಡು
ಬಿಟ್ಟಗಲದೆ ಮಹ ಶಿಷ್ಟರೊಡನಾಡೊ
ಅಷ್ಟಮೂರುತಿಪಾದ ನಿಷ್ಠೆಯ ಭಜಿಸು ನಿ
ನಿನ್ನಷ್ಟದಖಿಲವರ ಕೊಟ್ಟು ರಕ್ಷಿಸಸನೆಲೊ 2
ಹಲವು ಭ್ರಾಂತಿ ಬಿಡು ಮಲಿನಗುಣವ ದೂಡು
ಹೊಲೆಯ ಮನಸಿನ ಮಹ ಕಲ್ಮಷ್ಹಸನಮಾಡು
ಜಲಜಾಕ್ಷನಂಘ್ರಿಯಂ ನಿಲದೆ ಭಜಿಸು ನಿನ
ಗೊಲಿದು ನಿಜಸುಖವಿತ್ತು ಸಲಹುವ ಶ್ರೀರಾಮ 3