ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

-------ಅರಿಯೆ ----ನಡತಿ ಮಾರ್ಗವನೂ ಹೀನಮಾನವ ನಾನು ಯಂ ---- ಹರೇ ಪ ನಾನಾಯೋನಿಗಳಲ್ಲಿ ನಟಿಸಿನಟಿಸಿ ಇಲ್ಲದೆ ಇರೊ ವಿಧಾನ ಒಂದಲ್ಲದೆ 1 ದರಿ----ರ್- ಸರತಿ ತಿಳಿದಿನ್ನು ಧೀನ ರಕ್ಷಕ ನಿನ್ನ ದಿನಚರ್ಯ ವರ್ಣಿಸುವರ ಕಾಣುತಲೆ ವಂದಿಸಿ ಕಾಲುಹಿಡಿವದು ಅರಿಯೆ 2 ವೇದಾದಿ ಸಕಲವು ವಿದ್ಯಶಾಸ್ತ್ರವನರಿಯೆ ಮೇದಿನಿಯೊಳು ನಡೆವ ಸುಮಾರ್ಗ ನಾನರಿಯೆ ಗಾಧಿ ಬೋಧಿಗಳೀಗೆ ಒಳಗಾಗಿ ಈ ಪರಿಯೆಗಾಧೆಯೊಳಗೆ ಬಿದ್ದನ ಕೈ ಪಿಡಿಯೊಧೊರಿಯೆ 3 ಆಗ ಅಂತರಂಗದಾ ಭಾವನರಿಯೆ ನಾಗಶಯನ ನಿಮ್ಮ ನಾಮವೆಂಬುದು ಅರಿಯೆ ಕೃಪೆತೋರಿ ರಕ್ಷಿಸಯ್ಯಾ ಹರಿಯೆ 4 ಸಕಲಾವು ನೀನೆಂದು ಸಾರುವ ಧರೆಯಾ ಭಕ್ತವತ್ಸಲನೆಂಬ ಬಿರುದು ನಿಂದರಿಯಾ ಅಕಳಂಕ ಮಹಿಮ `ಹೊನ್ನವಿಠ್ಠಲನೆ’ ಪ್ರೀಯಾ ಮುಕುತಿದಾಯಕ ಆಲಸ್ಯನಾದವನ ಪೊರೆಯಾ 5
--------------
ಹೆನ್ನೆರಂಗದಾಸರು
ಕ್ಷಮಾಸಮುದ್ರನೆ ನಮಾಮಿ ಗುರು ನಿನ್ನ ಸಮಾನರ್ಯಾರಿನ್ನೂ |ಪ|| ಕಮಲ ಭ್ರಮರ ತವಪದ | ನಮಿಸುವೇ ಅ.ಪ. ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕಗೀತಾರ್ಥ ಸಂಗ್ರಹ ಕೃತೇ ನಮೋ |ಪ್ರತ್ಯರ್ಥಿಮತ್ತೇಭ ಪಂಚಾಸ್ಯ ನಿನ್ನಯಭೃತ್ಯನ ಅಪಮೃತಿ ತಪ್ಪಿಸಿದೇ 1 ಅದ್ವೈತ ದುಸ್ಸಹ ವಾಸನ ನಿರಸನಖದ್ಯೋತ ಸಮ ವ್ಯಾಪ್ತ ಪರಿಮಳಾ |ಸದ್ವೈಷ್ಣ್ವ ಕುಮುದೇಂದು ವಿದ್ವಾಂಸನತ ಪದದ್ವಂದ್ವಾ ವಿಮಲ ಕಮಲಾ 2 ಕುಷ್ಠಾದಿ ರೋಗಹರ ಕಷ್ಟ ನಿವಾರಣಶ್ರೇಷ್ಠ ನಿಮ್ಮಯ ಸ್ಮರಣಾ |ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ ದುಷ್ಟವಾದಿಯ ದಮನಾ3 ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣಬಾಹ್ಲೀಕ ಸೂನಾದೆ ಪ್ರತೀಪಗೆ |ವಿಹ್ವಲ ಹೃದಯರ ಚಂದ್ರಿಕೆಯಿಂದಲಿಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 4 ಸದನ ಗುರುವೇ |ಮಂತ್ರಾಗಮ್ಯ ಗುರು ಗೋವಿಂದ ವಿಠಲನಅಂತರದಿ ತೋರಿಸಿ ರಕ್ಷಿಸಯ್ಯಾ 5
--------------
ಗುರುಗೋವಿಂದವಿಠಲರು
ಬಂದ ದುರಿತಗಳ ಪರಿಹಾರ ಮಾಡಯ್ಯಾ | ತಂದೆ ಶ್ರೀ ಗುರು ಮಹೀಪತಿರಾಯಾ ಪ ಕಾಲತುಂಬಿದ್ದರೆ ಆಲಸ್ಯವೇಕಯ್ಯಾ | ಕಾಲ ಕರ್ಮಗಳಿಂದ ಶ್ರಮಿಸುತಿಹನು | ಬಾಲಕನ ಕೈಯ ಸೇವೆ ಬೇಕಾದರೆ | ದುರಿತ ಛೇದಿಸು 1 ಮುನ್ನಿನ ಕರ್ಮಗಳ ಬಹಳ ಭೋಗಿಸಿದೆನು | ಇನ್ನು ನಿನ್ನ ಕೃಪೆ ಅವಿಚ್ಛಿನ್ನ ಮಾಡಯ್ಯ | ನಿನ್ನ ಕರದಿಂದಲಿ ಚನ್ನ ಚಕ್ರವಪಿಡಿದು | ಮುನ್ನೆ ದಾಸರ ಶ್ರಮ ಹರಿಗಡದಂತೆ 2 ಪರವಸ್ತು ದತ್ತಾತ್ರೇಯ ಸೂರ್ಯಕೋಟಿ ಪ್ರಕಾಶ | ಗುರು ಮಹೀಪತಿಯಾಗಿ ಜನಿಸಿದೈಯ್ಯ | ತರಳ ದೇವಗಿನ್ನಾರುಗತಿಯು ಇಲ್ಲ | ಪೂರ್ಣಾಯುಷ್ಯವ ಕೊಟ್ಟು ರಕ್ಷಿಸಯ್ಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತರ ರಿಣಕಂಜಿ ಅಡಗಿದರೇ | ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ | ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ | ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು | ಉತ್ತಮ ನರಮೃಗದಂತಡವಿಯ ಸೇರಿ1 ಬಡತನ ದೋರಲೆಂದು ಯಾಚಕನಾದರೇನು | ಕಡಲ ಬೊರಿಯಾ ಮನೆ ಮಾಡಿರಲೇನು | ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ | ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2 ಮುನಿಯಂತೆ ದಿಗಂಬರ ರೂಪವ ತಾಳಲೇನು | ಜನದ ಕಲಿಕೀ ಮಾತು ಕಡೆಗಾಣುದೇ | ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ | ಸಂತೈಸಿ ಶರಣರ ರಕ್ಷಿಸಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು