ಆತ್ಮನಿವೇದನೆ
ಅಗಲದಿರೆಲೋ ನೀನೆನ್ನ ಬಿಟ್ಟು ಅಗಲದಿರೆಲೋ
ನಿಗಮಾತೀತ ನಿರ್ಜರೇಶ ಪ
ಹಗಲು ಇರುಳು ನಿನ್ನ ಬಿಟ್ಟು
ಅಗಲಿ ಇರಲಾರೆ ನಾನು
ಸುಗುಣ ಸಂತರಾತ್ಮನೆನ್ನ
ಬಗೆಗೊಂಡು ರಕ್ಷಿಸಭವ 1
ಮುಟ್ಟಿಭಜಿಪೆ ನಿನ್ನ ಚರಣ
ಕೆಟ್ಟಗುಣಗಳೆಣಿಸದೆನ್ನ
ನಿಷ್ಠೆಯೊಳಗೆ ನಿಂತು ಸಲಹೋ
ಕಷ್ಟಹರಣ ಕರುಣಾಶರಧಿ 2
ಶ್ರೀಶರಾಮ ನಿನ್ನ ಚರಣ
ದಾಸ ನಾನು ಮನ್ನಿಸೆನ್ನ
ಧ್ಯಾನದಲ್ಲಿ ನೀ ವಾಸನಾಗಿ
ಪೋಷಿಸನುಮೇಷ ಬಿಡದೆ 3