ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾ ಬಿಡುವನಲ್ಲಾ ಗೋಪಾಲಾ ನಿನ್ನ ಬಿಡುವನಲ್ಲ ಎನ್ನ ರಕ್ಷಿಸದಿರೆ ಪನ್ನಗಾದ್ರಿಯವಾಸ ಪರಮಪುರುಷರಂಗಾ ಪ ನಾಗಾರಿ ರೂಪನಾದ ಪರಮಾನಂದ ಭೋಗಿಶಯನ ವಿನೋದ ಭಕ್ತವತ್ಸಲ ಸಾಗರನಳಿಯ ಭೂಸುರಧೇನು ಪೋಷಕ ಭಾಗವತರ ಪ್ರಿಯಾ ಯೋಗಿಗಳರಸ1 ಜಲಜಾಕ್ಷ ನಳಿನನಾಭ ಜಾನಕೀರಮಣ ಜಲನಿಧಿಶಯನ ದೇವಾ ಜಗದೋದ್ಧಾರ ಜಲಜಬಾಂಧವ ಕುಲ ಶ್ರೇಷ್ಠಾದಿ ಮೂರುತಿ ಒಲಿದೆನ್ನ ದುಷ್ಕರ್ಮನಳಿದು ಪೋಷಿಸದಿರೆ 2 ಶಂಬರಾರಿಯ ಪಿತನೆ ಜಗನ್ನುತ ಕುಂಭಿನೀಧವನಾದನೇ ಗೋವಿಂದ ಶ್ರೀ ಕಂಬುಕಂಧರ ಕೃಷ್ಣಾ ಅಂಬುಧಿ ಬಂಧಿಸಿ ಅಂಬುಜಾಕ್ಷಿಯ ತಂದ ಹರಿ 'ಹೆನ್ನ ವಿಠ್ಠಲಾ’ 3
--------------
ಹೆನ್ನೆರಂಗದಾಸರು
ಪಾಮರ ಜನರಿಗೆಲ್ಲ ಪ ಕಾಮಮದ ಮತ್ಸರಗಳಿಂದಲಿ ತಾಮಸೌಘಕೆಅ.ಪ ಸ್ನಾನ ಮೌನ ಜಪತಪಗಳನರಿಯದೆ ಸ್ವಾಮಿ ನಿನ್ನನು ಮುಟ್ಟಿ ಪೂಜಿಸದೆ ಸೀಮೆಯರಿಯದ ಕಾಮಕರ್ಮದಿ ನೇಮವಿಲ್ಲದ ಕ್ಷುದ್ರಸ್ವಾರ್ಥದಿ ತಾಮಸರ ಸಂಸರ್ಗದಿಂದ ವಿ ರಾಮವರಿಯದ ಜನರ ಪಾಲಿಗೆ 1 ಜ್ಞಾನ ಭಕ್ತಿ ವೈರಾಗ್ಯಗಳರಿಯದೆ ಜ್ಞಾನಿಜನರ ಸಂಗವ ಬಯಸದೆ ಹೀನದುಷ್ಕರ್ಮಗಳ ಮಾಡುತ ನಾನು ತಾನೆಂಬ ಕೊಬ್ಬಿಲಿ ಜಾನಕೀಪತಿ ನಿನ್ನ ಮಹಿಮೆಯ ಕಾಣದಿಹ ದುಷ್ಕರ್ಮಿಜನರಿಗೆ 2 ಶ್ರೀನಿಧಿ ನೀ ಕರುಣಿಸಿ ರಕ್ಷಿಸದಿರೆ ದೀನಜನರ ಪಾಲಿಪರಾರೋ ಸಾನುರಾಗದಿ ಬೇಡಲರಿಯದ ಜ್ಞಾನಹೀನರ ತಪ್ಪನೆಣಿಸದೆ ನೀನೆ ಕೈಪಿಡಿದೆತ್ತಿ ರಕ್ಷಿಸು ಮಾನನಿಧಿ ರಘುರಾಮವಿಠಲ 3
--------------
ರಘುರಾಮವಿಠಲದಾಸರು
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ. ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ 1 ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ 2 ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ 3 ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ 4 ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ 5 ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ 6 ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ7 ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ 8 ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ 9 ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ 10 ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ 11
--------------
ಶ್ರೀಪಾದರಾಜರು
ಏನು ಗತಿಯೊ ಮುಂದೆನಗೆ ಗೋವಿಂದಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.ನಿಶಿದಿನ ಹಸಿವುತೃಷೆಸುಡುವ ಕುಮರಿಯುಮಸಿವರ್ಣ ಮಾಡಿ ಕೇರಿಡಿವ ಮೂರುರಿಯು 1ನಾಚಿಕಿಲ್ಲದ ವಿಷಯಾಸೆಯಸಹ್ಯನೀಚ ದುರುಕ್ತಿಯಸ್ತ್ತ್ರದ ಘನಗಾಯ 2ಮಾಯದ ಕಡಲೊಳು ಕಟ್ಟಿಹ ಕೊರಳುಆಯಾಸ ಬಡುತ ಬಡುತ ಬಿದ್ದಿತುರುಳು 3ಎಳ್ಳನಿತು ಜ್ಞಾನ ಅಹಂಕಾರ ಬಹಳಘಲ್ಲನೆ ತಗಲುವ ಜ್ಞಾನದಶೂಲ4ಮರಹುಮದಗಳೆಂಬ ಮುಸುಕಿದ ಮೆಳೆಯುಪರದಾರ ಪರನಿಂದೆಯಗ್ನಿಯ ಮಳೆಯು 5ಬೇಡಿದ ಬಯಕೆ ಸಾಧ್ಯಾಗದ ನೋವುಮೂಢತನದಿ ದಿನ ನೂಕುವ ಸಾವು 6ಇನ್ನಾರೆ ಸಜ್ಜನ ಸಂಗಕೌಷಧಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ 7
--------------
ಪ್ರಸನ್ನವೆಂಕಟದಾಸರು