ಲಾಲಿಪುದೆನ್ನ ಸೊಲ್ಲ ಲಕುಮಿಯ ನಲ್ಲ
ನೀಲ ನೀರದ ನಿಭ ನಿರುಪಮ ಮಲ್ಲ ಪ.
ಉದಯದೋಳೇಳುತ ಉಚಿತ ಕರ್ಮಗಳ
ಸದರದಿ ಮಾಡದೆ ಸಾಧುಪೂಜೆಗಳ
ಮದ ಮುಖತನದಿಂದ ಮನೆಯಲ್ಲಿ ತಿರುಗುವೆ-
ನಿದನು ನಿನ್ನಯ ಸೇವೆಯೆಂಬ ಭಾವನೆಯಿತ್ತು 1
ಕೀಟಕೆ ಸಾಮ್ರಾಜ್ಯ ಪದವಿಯನಿತ್ತಿ
ಹಾಟಕಕಶಿಪನ ಮಗನ ಮೇಲೆತ್ತಿ
ಆಟದ ನೆವದಿಂದ ಶಕಟನ ತರಿದಿ ಕಿ-
ಭವ ದಾಟುವಂದದಿ ತೋರಿ2
ಪಾದ ವನರುಹಗಳನು
ನೆನೆದು ಪೂಜಿಸುವದಕನುಕೂಲಗಳನು
ಮನೆಗಧಿಪತಿ ನೀನು ಮಾಡಿ ರಕ್ಷಿಪುದಿನ್ನು
ವನಜ ಭವಾರ್ಚಿತ ವೆಂಕಟಾಚಲನಾಥ 3