ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ನೀನಹುದೆಂಬುದೆಂದಿಗು ದಿಟವಯ್ಯ ಇಂದಿರೆಯರಸ ಜೀಯಾ ಕುಂದುಕೊರತೆಗಳನೊಂದು ನೋಡದೆ ಕೃಪೆ ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ. ತನಗನುವಾಗಿರೆ ತೋಷಬಡುವ ತಾತ ಕೊನರಿಕೊಂಬುವ ಕಷ್ಟಕಾಲದಲಿ ವನರುಹದಳನೇತ್ರ ವಾರ್ಧಿಬಂಧನ ನೀನು ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1 ಅಘಟಿತಾಘಟಕನೆ ಆದಿ ಪರುಷಮಹ- ದಘನಿವಾರಣ ಶಕ್ತ ಗುಣವಾರಿಧೆ ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ ರಘುಕುಲತಿಲಕ ರಾವಣವೈರಿ ಸುಖಕಾರಿ 2 ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ ಅಪ್ಪ ನೀನಹುದೆಂಬ ನಿರ್ಣಯವ ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು