ನಿಲ್ಲು ನಿಲ್ಲು ಕೃಷ್ಣ ನಿನ್ನ ಸೊಲ್ಲ ಮುರಿಯ ಬಂದೆವು
ಸೊಲ್ಲ ಮುರಿಯ ಬಂದೆವು ಈ ಕಳ್ಳತನವ ಸಹಿಸೆವು 1
ದಿಕ್ಕು ರಕ್ಷಿಪರಿಗೆ ದಿಕ್ಕು ಕಾಣದಂತೆ ಇರುವುದು
ಸೊಕ್ಕು ಮುರಿದು ನಿಮ್ಮ ಕಾರ್ಯ ಧಿಕ್ಕರಿಸುವೆ ಕ್ಷಣದಲಿ 2
ಈಡುಮಾಡಲೇಕೆ ಇಂಥ ಕೇಡಿಗೆ ಈ ಅಬಲೆಯ
ನೋಡಿ ಎಮ್ಮ ಅವಿತುಕೊಂಡ ಹೇಡಿ ಇವನ ಬಿಡುವೆನೆ 3
ಎಂಟು ಜನ ದಿಕ್ಪಾಲಕರು ಸೊಂಟ ಮುರಿವ ರಾಣಿಯ
ಶೌರಿ ತಂಟೆಗಾರು ಬರುವರು 4
(ಸತ್ಯಭಾಮೆ ಮತ್ತು ದೇವೇಂದ್ರನ ವನಪಾಲಕರ ಸಂವಾದ)