ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ಪ ಬೊಮ್ಮ ಮೊದಲು ಸುರೋತ್ತಮದ ಪಾದ ಧುಮ್ಮಿನೊಳು ಮುಳುಗಿಹೆ ಎಮ್ಮಯ್ಯ ಕೇಳು 1 ಸರ್ವಜ್ಞನೆಂಬಿಯಾ ಉರ್ವಿಯ ಪತಿಗಳು ಸರ್ವ ಜನಗಳಾ ಪೆÀೂರ್ವರೆ ಕಂಡೀಗ2 ಅಕ್ಷೀಣ ಶಕುತೆಂಬ ದಾಕ್ಷಿಣ್ಯವಿಲ್ಲದೆ ಸುಕ್ಷೀಣ ಜನರನ್ನು ರಕ್ಷಿಪರಯ್ಯ 3 ಭಕುತ ವತ್ಸಲನೆಂಬೊ ಭಕುತಿಯು ಎನ್ನಲ್ಲೆ ಯುಕುತವಾಗಿಹವು ವ್ಯಕತ ನಿನಗಲ್ಲವೆ 4 ಶರಣರ ದೊರೆಯೆಂದು ಕರುಣ ಮಾಡುವೆನೆಂಬ ಸಿರಿ ವಾಸುದೇವವಿಠಲ ಕರುಣಿಸಾಲಸ್ಯವ್ಯಾಕೊ 5
--------------
ವ್ಯಾಸತತ್ವಜ್ಞದಾಸರು
ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ ಬಹು ಪರಾಕೆಲೊ ಮುರಾರಿ ಪ. ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು ಶಕ್ತಿ ಹೀನನಾಗಿ ಏಳದಂತಾಗಿದೆ ಮತ್ತಾರಿಗಳವಲ್ಲ ಮಂದರಾದ್ರಿಧರನೆ ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ 1 ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ 2 ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ ಚೆಂಡಾಡಿದ ಚಿನ್ಮಯರೂಪ ನೀನು ದಿಂಡರಿದು ದುರಳರನು ದುರಿತಗಳ ಪರಿಹರಿಸಿ ಪುಂಡರೀಕಾಕ್ಷ 3 ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು ಜೋಕೆಯಲಿ ಪಥÀವೆನೇರಿಸಿದ್ಯೊ ಜಗದೀಶ 4 ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು ನಿನ್ನನೆ ನಂಬಿದವಳಿಗಿಂತ ಉನ್ನತವಾದ ಕಂಟಕವು ಬಂದಿದೆ ಕಾಯೊ ಪನ್ನಗಶಯನ ಹೆಳವನಕಟ್ಟೆ ರಂಗಯ್ಯ 5
--------------
ಹೆಳವನಕಟ್ಟೆ ಗಿರಿಯಮ್ಮ