ನಂಬಿ ಭಜಿಸಿರೈಯ್ಯಾ ಶರಣರು ಪ
ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ|
ಹಂಬಲ ಬಿಡಿ ಅನ್ಯ ಮಾರ್ಗದಾ|
ಅಂಬುಜಾಂಬಕ ಪರದೈವನು ಗಡಾ| 1
ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ|
ಲಾ ಮುನಿಯಮರರು ಕಳುಹಲು|
ಪರದೈವವೆಂದನು ಗಡಾ|2
ದೇವಾ|ಸುರರೆಲ್ಲ ತವಕದಿ ಕುಳಿತಿರೇ|
ಇಂದಿರೆ ಬಂದು|ಹರಿಗೆ
ಮಾಲೆಯ ಹಾಕಿದಳು ಗಡಾ 3
ಶ್ರೀ ಚರಣವ ತೊಳೆಯಲು|
ಸುರನದಿ ಬರೆ|
ಮೃಢ ಶಿರಸದಿ ಧರಿಸಿದ ಗಡಾ4
ಮೂರಕ ಮೂರ ಮೂರುತಿಯಾಗಿ ಗುಣ|
ಮೂರಕದೂರವದೆನಿಸುವಾ|
ಸಾರಿದವರಾ ಕಾವಾ ಮಹಿಪತಿಸುತ|
ಸಾರಥಿಯಾಗಿ ರಕ್ಷಾಪ ಗಡಾ5