ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದೆನಯ್ಯ ನಂದನಂದನ ಪ. ಹಿಂದು ಮುಂದನರಿಯದಿಂದು ತಂದೆ ನೀನೆ ರಕ್ಷಸೆಂದೇ ಅನನ್ಯಭಾವದೇ ಅ.ಪ. ನೋಡಲಿಲ್ಲ ನಿನ್ನಪದವ ಪಾಡಲಿಲ್ಲ ನಿನ್ನ ಗುಣವ ಮಾಡಲಿಲ್ಲ ನಿನ್ನ ಸೇವೆ ಮೂಢನಂದದಿ ದೂಡಿಸುಜನರ ಸಂಗವನ್ನು ಬೇಡಿ ಕೃಪಣರ ಕರುಣೆಯನ್ನು ಕಾಡುಹರಟೆಯಿಂದ ಕಳೆದೆನಕಟ ಕಾಲಮಂ1 ಉರಿವಕೊಳ್ಳಿಯನ್ನೆ ತುಳಿದೆ ಸುರಿದೆನೀರನುರಿಗೆ ಬರಿದೆ ಹಿರಿಯರುಕ್ತಿಯ ಮೀರಿನಡೆದೆ ಮೆರೆದೆ ಗರ್ವದೆ ಶರಣರನ್ನು ಜರಿದು ನುಡಿದೆ ಪರರ ಹಿಂಸೆಗೈದೆ ಮದದೆ ಪರಮಪಾಪಿಯಾದೆ ನಿನ್ನ ಸ್ಮರಣೆ ಮಾಡದೆ 2 ಅರಿತು ಅರಿಯದಾಚರಿಸಿದಂಥಾ ದುರಿತಗಳನು ಕುರಿತು ಕುರಿತು ಪರಿಪರಿಯೊಳೊರಲುತಿಹೆನು ಪರಮಪುರುಷನೇ ವರದನೆಂಬ ಬಿರುದು ನೆನೆದು ಶರಣುಬೇಡುವ ಕಂದನೆಂದು ಕರವಪಿಡಿದು ಪೊರೆಯೊ ಶೇಷಗಿರಿಯ ವರದನೆ3
--------------
ನಂಜನಗೂಡು ತಿರುಮಲಾಂಬಾ