ಪತಿತಪಾವನ ಪರಮದಯಾಳು ಶ್ರೀನಾಥ
ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ
ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ
ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ
ಯತಿಜನಾಶ್ರಯಾನಂತಮಹಿಮ ಕೃಪಾಲ
ಅತೀತ ತ್ರಿಗುಣ ಸತತ ಸುಪಥದಾಯಕ 1
ಅಚ್ಯುತಾನಂತ ಮುಚುಕುಂದವರದ ಮುಕುಂದ
ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ
ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ
ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ 2
ಅಚ್ಯುತ ಪಕ್ಷಪಾಂಡವ
ಪಕ್ಷಿವಾಹನ ರಕ್ಷರಕ್ಷ ಜನಾರ್ದನ
ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು-
ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ3