ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಗಜಚರ್ಮಾಂಬರ ಗಂಗಾಧರನೇಗಜಮುಖಜನಕ ಗೌರಿಯ ರಮಣ ಓ ತ್ರಿಜಗದೊಂದಿತನೆ ಸಾಂಬಶಿವ ಮಹಾದೇವ ಪಫಾಲನೇತ್ರನೆ ರುಂಡಮಾಲಾಧರನೆನೀಲಕಂಠನೇ ನಿತ್ಯಾನಂದ ಓಕಾಲಾಂತಕನೆ ಸಾಂಬಶಿವ ಮಹಾದೇವ 1ಮದನ ಹರನೆ ಶಿವ ಕಂಬುಕಂಧರನೆಪದ್ಮಾಕ್ಷನಯನ ಪಾರ್ವತಿ ರಮಣ ಓಬುಧಜನಪ್ರಿಯನೆ ಸಾಂಬಶಿವ ಮಹಾದೇವ 2ಭೂತಿಭೂಷಣನೆ ಸರ್ವ ಭೂತಾತ್ಮಕಪಾತಕಹರ ಪಾರ್ವತಿ ರಮಣ ಓಅನಾಥ ರಕ್ಷನೆ ಸಾಂಬಶಿವ ಮಹಾದೇವ 3ಇಂದ್ರವಂದಿತ ಭುಜಗೇಂದ್ರ ಭೂಷಣನೆತಂದೆ ಏಳುಗಿರಿ ವೆಂಕಟಸಖನೇ ಓಚಂದ್ರಶೇಖರ ಸಾಂಬಶಿವ ಮಹಾದೇವ 4
--------------
ತಿಮ್ಮಪ್ಪದಾಸರು
ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ ಪ ಹಿಂದುಮುಂದು ಗತಿಯದಾರುಯಿಲ್ಲವೆಂಬೆನೊ ಅ.ಪ ಕುಕ್ಷಿಯೊಳಗೆ ಜಗವನಿಟ್ಟುಕೊಂಡು ಪೊರೆವನೆ ಪಕ್ಷಿಗಮನ ನಿಮ್ಮ ನೆನೆವೆ ಭಜಕಗೊಲಿವನೆ 1 ಕ್ಷೀರವಾರ್ಧಿಶಯನ ಗೋಪಿ-ಜಾರ ಪಾಲಿಸೊ ಮಾರಜನಕ ಮುದದೊಳೆನ್ನ ದೂರಲಾಲಿಸೊ 2 ಸುಮಹದೇವಪುರದ ನಿಲಯ-ಸುಜನರಕ್ಷನೆ ಕ್ರಮದೊಳೆನ್ನ ರಕ್ಷಿಸಯ್ಯ-ಕಮಲೆಯಾಣ್ಮನೆ 3
--------------
ರಂಗದಾಸರು
ತಿರುಪತಿ ಶೇಷಾದ್ರಿವಾಸ ಶ್ರೀನಿವಾಸ ಪ ಶೇಷಾದ್ರಿವಾಸ ವಾಸುಕಿಶಯನನೆ ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ ಭಾಭರಣನೇ ಕರುಣಾಸಾಗರನೆ 1 ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ ಯಾದವರಕ್ಷ ಯದುಕುಲಪಕ್ಷನೆ ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2 ಭವಭಯಭಂಗ ಶ್ರೀನಿವಾಸ ಕರುಣಾಪಾಂಗ ಗರುಡತುರಂಗನೆ ನೀಲಮೇಘಾಂಗನೆ ಸುಗ್ರೀವಸಂಗನೆ ವಾಲಿ ವಿಭಂಗನೆ 3 ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ ಭಕ್ತರ ಪೊರೆಯುತ ನಿಂದ ಗೋವಿಂದ 4 ಗರುಡವಾಹನನೆ ಶ್ರೀನಿವಾಸ ಪರಮಪಾವನನೆ ಪಂಕಜನಯನನೆ ಪದ್ಮಿನೀ ಅರಸನೆ ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
--------------
ಯದುಗಿರಿಯಮ್ಮ
ಪಾಲಿಸೊ ಶ್ರೀನಿವಾಸ ಜಗದೀಶ ಪ ಮೇಲುಗಿರೀಶ ಹೃತ್ಕುಮುದನಿವಾಸ ಸತೀಶ ನೀನೆ ಅವಿನಾಶನೆ ಅನಿಶ ಅ.ಪ ಅನಿಮಿತ್ತ ಬಂಧು ನೀ ನಿನ್ಹೊರತು ಅನ್ಯರುಂಟೇ ಅನಪೇಕ್ಷನು ನೀ ದೀನರಕ್ಷನೆ ನಾನೇನರ್ಪಿಸಬಲ್ಲೆ ನೀ ಬಲ್ಲೆ ಅನುದಿನ ಮನೋವಾಚಕಾಯದಿ ನಾನೆಸಗುವುದು ಬಲ್ಲೆ ಅಲ್ಲಲ್ಲೇ ಘನಮಹಿಮನೆ ಎನ್ನ ಮನದಲ್ಲಿ ಅನುದಿನ ನಿನ್ನ ನೆನೆಯುವುದನೆ ಇತ್ತು ಕೊನೆಗಾಣಿಸು ಇನ್ನು 1 ಸತ್ಯಸಂಕಲ್ಪ ನೀ ನಿತ್ಯನೂತನಪ್ರಭುವೇ ಅತ್ಯಧಿಕದಿ ಭಕ್ತೋತ್ತಮರು ನಿತ್ಯ ಸೇವಿಸುತಿಹರೋ ಅವರ ಭೃತ್ಯನೆನಿಪ ಸಂ- ಪತ್ತನಿತ್ತು ಆಪತ್ತು ಹರಿಸಿ ಭಕ್ತಿಯ ನೀಡಯ್ಯ ಕರ್ಮ ಬೆನ್ಹತ್ತಿ ಹತ್ತಿ ಆಸೆ ಪೊತ್ತು ಕೊನೆಗೆ ನಾ ಉನ್ಮತ್ತನಾದೆ 2 ಪ್ರಣವಸ್ತಗೆ ದೇವಾ ನೀ ಪ್ರಣತ ಕಾಮದ ಕಾವಾ ಪ್ರಣತ ಜನರ ಮುಖ್ಯಪ್ರಾಣಾಂತರ್ಗತ ಫಣಿರಾಜಶಯ್ಯ ಹೇ ಜೀಯ್ಯ ಗುಣಮಣಿ ಶ್ರೀ ವೇಂಕಟೇಶ ಕ- ರುಣಾಕರ ಇನ್ನು ನಿನಗೆಣೆಯ ದೊರೆಯೆ ಮಣಿದು ಬೇಡುವೆ ನಿನ್ನ ದಣಿಸಲಾಗದು ಇನ್ನೂ ಧಣಿಯು ನೀ ಉರಗಾದ್ರಿವಾಸ ವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ ಕುಂದರದಾನನ ಸುಂದರ ಕಾಯನೆ ಬಾ 1 ನೀರಜ ನೇತ್ರನೆ ಮಾರಸ್ವರೂಪನೆ ಬಾ 2 ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | 3 ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | 4 ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | 5
--------------
ಬೆಳ್ಳೆ ದಾಸಪ್ಪಯ್ಯ
ಸಚ್ಚಿದಾನಂದಾತ್ಮ ಶ್ರೀಪುರುಷೋತ್ತಮ ಶ್ರೀಮಾಧವಶೌರೇಸತ್ಯ ಸಂಕಲ್ಪ ಸರ್ವೇಶಾ ಸತ್ಯ ಭಾಮೆ ರುಕ್ಮಿಣೇಶ ಪಸಾರಸಾಕ್ಷನೆ ಪರಿವಾರ ರಕ್ಷನೆ ಕಮ-ಲಾಯತಾಕ್ಷ ನಿರುಪಮ ಚರಿತಾ ಶುಭಗುಣಭರಿತಾ ಸುರಮುನಿ ನಮಿತಶ್ರೀ ಅ.ಪಕರುಣಾಕರಸುಂದರ ಶ್ರೀರಂಗಾ ಶರಣಾಗತವತ್ಸಲ ಭವಭಂಗನಿರುತದಲೀ ಸ್ಮರಿಸುವರ ಕರುಣದಲೀತ್ವರಿತದಿ ಸಲಹುವ 1ಬಾ ಯದುವರ ಬಾ ರಘುವರ ಬಾನಗಧರಬಾ ಬಾ ಬಾಬಾಭವಹರಬಾಮುರಹರಬಾಸಿರಿವರ ಬಾ ಶ್ರೀಶಾ 2ಶ್ರೀಶನೆ ಬಾ ಬಾ ಬಾ ಕೇಶವ ಬಾ ಬಾ ಬಾಭೂಸುರ ಪಾಲಬಾ ಮುರಳಿಧರಾ ಸುರನÀುತ ಶ್ರೀಕಮಲನಾಭ ವಿಠ್ಠಲ ನರಹರಿ 3
--------------
ನಿಡಗುರುಕಿ ಜೀವೂಬಾಯಿ