ಶಾಂತಿಯ ಕರುಣಿಸೊ ಈ ಮನಸಿಗೆ
ಶಾಂತಿಯ ಕರುಣಿಸೊ ಪ
ಶಾಂತಿಕರುಣಿಸಿ ನಿನ್ನಂತರಂಗದಿ ನಿಮ್ಮ
ಚಿಂತೆ ಇರಿಸು ಕರುಣಾಂತರಂಗ ಹರಿಅ.ಪ
ವಿಲಸಿತಮತಿ ಕೊಡೊ ಮನವು
ಚಲಿಸದಪದ ನೀಡೋ
ಸುಲಭದಿ ತವಪಾದ ಒಲಿಸಿ
ನಲಿಯುವ ದಾಸರೊಳಗೆ ಕೂಡಿಸಿ ಎನ್ನ
ನೊಲಿದು ರಕ್ಷಣೆಮಾಡೊ 1
ಹಲುಬಾಟ ದೂರಮಾಡೊ ಎನ್ನಯ
ಪ್ರಳಯ ಗುಣೀಡ್ಯಾಡೊ
ಗಲಿಬಿಲಿ ಸಂಸಾರದೊಲಿಮಿಲಿ ಬಳಲುವ
ಹೊಲೆಮತಿ ಕಳೆದೆನ್ನ ಸಲಹೆಲೊ ಜ್ಞಾನದಿ 2
ಮರೆಯ ಬೇಡ ಎನ್ನ ಕರುಣಾ
ಭರಣ ಭಕ್ತಪ್ರಾಣ
ಹರಿವ ಜಗದಿ ಎನ್ನ ಪರಿಪರಿ ನೋಯ್ಸದೆ
ಪರಮಮುಕ್ತಿಯನಿತ್ತು ಪೊರೆಯೊ ಶ್ರೀರಾಮ3