ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ
ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ
ಮೂರೇಳವತಾರ ನಿನಗೆ ನೂರೆಂಟು ಎನಗೇ1
ನಿನಗೆ ಸುರಮುನಿಗಣ ಎನಗೆ ಭೂಸುರಗಣ
ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2
ಜಗವು ಉದರವೆಂದು ಬಗೆದು ಪೋಪೆನೀ
ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3
ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ
ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4
ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ
ದುರಿತ ತೃಪ್ತತೆ ಯೆನಗೆ 5
ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು
ರಂಗನಾಥ ಶ್ರೀಶ ತುಂಗವಿಕ್ರಮ ನೀ 6
ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ
ಕಮಲಾಕ್ಷ ಪೊರೆದೇವ ರಾಮದಾಸನುತಾ 7